ರಾಜೀನಾಮೆ ನೀಡಿದ 16 ಮಂದಿ ಶಾಸಕರು ವಿಷ ಕುಡಿಯಬೇಕಾ..!!! CM BSY ಗರಂ ಆಗಿದ್ದೇಕೆ..?
ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿದ್ದು ದೋಸ್ತಿ ಸರ್ಕಾರ ಪತನವಾಗಿದೆ.. ರಾಜ್ಯದಲ್ಲಿ ಬಿ ಎಸ್ ವೈ ಸರ್ಕಾರ ರಚಿಸಲು ಮುಂದಾಗಿದ್ದಾರೆ.. ದೊಸ್ತಿಯ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದೆ ದೋಸ್ತಿ ಸರ್ಕಾರ ಪತನವಾಗಲೂ ಕಾರಣವಾಯ್ತು.. ರಾಜೀನಾಮೆ ಕೊಟ್ಟು ಮುಂಬೈ ನಲ್ಲಿ ಬೀಡುಬಿಟ್ಟಿದ್ದ ಅನರ್ಹ ಶಾಸಕರ ಮನವೊಲಿಸುವಲ್ಲಿ ದೋಸ್ತಿಗಳು ವಿಫಲರಾದರು..ವಿಶ್ವಾಸಮತ ಯಾಚನೆ ಮಾಡುವಲ್ಲಿಯೂ ಕೂಡ ಸೋತರು… ಇದೀಗ ಬಿಎಸ್ವೈ ಸರ್ಕಾರಲ್ಲಿಯೂ ಕೂಡ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲಾಗುತ್ತಿದೆ.
ಇದರ ನಡುವೆ ಬಿಎಸ್ ವೈ ಗರಂ ಆಗಿದ್ದಾರೆ. ಸಚಿವ ಸ್ಥಾನಗಳನ್ನೆಲ್ಲವನ್ನೂ ಲಿಂಗಾಯಿತರಿಗೆ ಕೊಟ್ಟರೆ ಬೇರೆಯವರು ವಿಷ ಕುಡಿಯಬೇಕಾ ಎಂದು ಸಿಎಂ ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ. .ಲಿಂಗಾಯಿತ ಸಮುದಾಯದ ಮುಖಂಡರು ಬುಧವಾರ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿಯಾಗಿದ್ದಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ..ಇದೇ ಸಮಯದಲ್ಲಿ ಸಮುದಾಯದ 16 ಮಂದಿ ಶಾಸಕರಿದ್ದು, ಅವರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಲಿಂಗಾಯಿತ ಮುಖಂಡರು 4 ಸಚಿವ ಸ್ಥಾನ ಕೊಡಬೇಕೆಂದು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದಾಗ ಗರಂ ಆದ ಯಡಿಯೂರಪ್ಪ, 4 ಸಚಿವ ಸ್ಥಾನ ಸಾಕಾ ಅಥವಾ 5 ಬೇಕಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಯಡಿಯೂರಪ್ಪ, ಎಲ್ಲಾ ಸಚಿವ ಸ್ಥಾನಗಳನ್ನು ನಿಮಗೆ ಕೊಟ್ಟರೆ ರಾಜೀನಾಮೆ ನೀಡಿದ 16 ಮಂದಿ ಶಾಸಕರು ವಿಷ ಕುಡಿಯಬೇಕಾ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆಯಾಗಿ ರಾಜಿನಾಮೆ ಕೊಟ್ಟಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಬಿಜೆಪಿ ಕೂಡ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ.
Comments