ದೋಸ್ತಿಗೆ ಬಿಗ್ ಶಾಕ್ ..!! ಸ್ಪೀಕರ್ ಗೆ ಅತೃಪ್ತ ಶಾಸಕರಿಂದ ಪತ್ರ..!!! ಪತ್ರದಲ್ಲಿ ಏನಿದೆ..?

ಸದ್ಯ ರಾಜ್ಯ ರಾಜಕಾರಣದ ಎಲ್ಲಾ ಗೊಂದಲಗಳಿಗೂ ಇಂದು ಸಂಜೆಯ ವೇಳೆಗೆ ತೆರೆ ಬೀಳಲಿದೆ ಎನ್ನಲಾಗುತ್ತಿದೆ.ಇಂದು 11 ಗಂಟೆಯೊಳಗೆ ಅತೃಪ್ತ ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕು. ಇಲ್ಲವಾದಲ್ಲಿ ನಿಮ್ಮನ್ನ ಅನರ್ಹ ಮಾಡಲಾಗುತ್ತದೆ ಎಂದು ಡಿಕೆಶಿ ಅತೃಪ್ತ ಶಾಸಕರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರು.. ರಾಜೀನಾಮೆ ನೀಡಿದ ಶಾಸಕರು ವಾಪಸ್ ಬರ್ತಾರೆ ಎಂದು ಕೊನೆ ಆಸೆ ಇಟ್ಟುಕೊಂಡಿದ್ದ ದೋಸ್ತಿ ನಾಯಕರಿಗೆ ಬಿಗ್ ಶಾಕ್ ಆಗಿದೆ.
ಅತೃಪ್ತ ಶಾಸಕರು ಇಂದು ಹಾಜರಾಗಲು ಸಾಧ್ಯವಿಲ್ಲವೆಂದು ರಾಜೀನಾಮೆ ನೀಡಿದ ಶಾಸಕರು ಸ್ಪೀಕರ್ ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಸ್ಪೀಕರ್ ಹಾಜರಾಗಲು ಸೂಚನೆ ನೀಡಿದ ನಂತರದಲ್ಲಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಅತೃಪ್ತ ಶಾಸಕರು ಪತ್ರ ಬರೆದಿದ್ದು ಇಂದು ಹಾಜರಾಗಲು ಸಾಧ್ಯವಿಲ್ಲ. 4 ದಿನ ಕಾಲಾವಕಾಶ ನೀಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಪ್ ಉಲ್ಲಂಘನೆ ಹಿನ್ನೆಲೆಯಲ್ಲಿ ಶಾಸಕರನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ನಿಂದ ದೂರು ನೀಡಲಾಗಿತ್ತು. ಆಡಳಿತ ಪಕ್ಷ ವಿಶ್ವಾಸಮತ ಯಾಚನೆ ಮಾಡಲು ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷ ವಿರೋಧಿಸುತ್ತಿದೆ.. ಸಂಜೆಯ ವೇಳೆಗೆ ಮೈತ್ರಿ ಸರ್ಕಾರ ಉಳಿಯುತ್ತಾ ಉರುಳುತ್ತಾ ನೀಡಬೇಕಿದೆ.
Comments