ದೋಸ್ತಿಗಳ ಜೊತೆ ಬಿಜೆಪಿ ಯ ನಾಯಕರು ಕೂಡ ಶಾಮೀಲಾಗಿದ್ದಾರಂತೆ..!!! ಯಾರ್ ಗೊತ್ತಾ..?
ಸದ್ಯ ರಾಜ್ಯ ರಾಜಕಾರಣ ಇನ್ನೂ ಕೂಡ ಅತಂತ್ರ ಸ್ಥಿತಿಯಲ್ಲಿಯೇ ಇದೆ.. ಕಳೆದ 15 ದಿನದಿಂದಲೂ ಕೂಡ ಅತೃಪ್ತ ಶಾಸಕರನ್ನು ಸೆಳೆಯುವಲ್ಲಿ ದೋಸ್ತಿ ಸರ್ಕಾರ ಶತ ಪ್ರಯತ್ನ ಮಾಡುತ್ತಿದ್ದರು ಕೂಡ ಯಾವುದು ಸರಿ ಹೋಗುತ್ತಿಲ್ಲ… ಗುರುವಾರದಿಂದಲೂ ಮೈತ್ರಿ ಸರ್ಕಾರವು ವಿಶ್ವಾಸಮತಯಾಚನೆ ಮಾಡಲು ಹಿಂದೆ ಮುಂದೆ ನೋಡುತ್ತಿದೆ.., ಹೀಗಿರುವಾಗ ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈತ್ರಿ ಸರ್ಕಾರದ ಉಳಿವಿಗಾಗಿ ದೋಸ್ತಿ ನಾಯಕರು ಬಿಜೆಪಿಯ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ, ಮೈತ್ರಿ ಸರ್ಕಾರದಿಂದ ಬಿಜೆಪಿಯ ಮೇಲೆಯೇ ಆಪರೇಷನ್ ನಡೆಯುತ್ತಿದ್ದು, ಸಚಿವರೊಬ್ಬರು ದೂರವಾಣಿ ಕರೆ ಮಾಡಿ ತನ್ನನ್ನೂ ಸೆಳೆಯಲು ಪ್ರಯತ್ನ ಪಟ್ಟರು... ಬಿಜೆಪಿಯ ನಾಯಕರೂ ಕೂಡ ಈ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು. ಸದ್ಯ ಆಡಳಿತ ನಡೆಸುತ್ತಿರುವ ಜೆಡಿಎಸ್ ಪಕ್ಷದ ನಾಯಕರೇ ಇದರಲ್ಲಿ ತೊಡಗಿದ್ದು, ಬಿಜೆಪಿಯ ಕೆಲವರಿಬ್ಬರು ಇದರಲ್ಲಿ ಶಾಮೀಲಾಗಿದ್ದಾರೆ. ಸಂದರ್ಭ ಬಂದಾಗ ಎಲ್ಲ ವಿವರಗಳನ್ನು ನೀಡುತ್ತೇನೆ ಎಂದು ಹೇಳಿದರು. ಒಟ್ಟಿನಲ್ಲಿ ಪಕ್ಷ ಪಕ್ಷಗಳಲ್ಲಿಯೇ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಕಂಡರೂ ಒಳಗೊಳಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ದೋಸ್ತಿ ನಾಯಕರು ಹೇಳುತ್ತಿದ್ದರೆ ಮತ್ತೊಂದು ಕಡೆ ಅಧಿಕಾರಕ್ಕಾಗಿ ಬಿಜೆಪಿಯವರು ಕಾತುರದಿಂದ ಕಾಯುತ್ತಿದ್ದಾರೆ.
Comments