ಬಿಜೆಪಿ ನಿಯೋಗಕ್ಕೆ ಸ್ಪೀಕರ್ ರಮೇಶ್ ಕುಮಾರ್ ಕೊಟ್ರು ಗುಡ್ ನ್ಯೂಸ್..!!!

ಸದ್ಯ ರಾಜ್ಯ ರಾಜಕೀಯದಲ್ಲಿ ಅತಂತ್ರದ ಸ್ಥಿತಿ ಏರ್ಪಟ್ಟಿದೆ.. ವಿಶ್ವಾಸಮತ ಯಾಚನೆ ಮಾಡಲು ದೋಸ್ತಿ ನಾಯಕರು ಯಾಕೋ ಹಿಂದೇಟು ಹಾಕುತ್ತಿದ್ದಾರೆ.. ಗುರುವಾರದಿಂದಲೂ ಕೂಡ ಈ ದೊಂಬರಾಟ ನಡೆಯುತ್ತಲೇ ಇದೆ. ರಾಜ್ಯಪಾಲರ ಸಂದೇಶವನ್ನು ಲೆಕ್ಕಿಸದೇ ದೋಸ್ತಿಗಳು ವಿಶ್ವಾಸ ಮತಯಾಚನೆ ಮಾಡದೇ ಕಾಲಹರಣ ಮಾಡುತ್ತಿದ್ದಾರೆ.. ಆದರೆ ಇದೀಗ ಸ್ಪೀಕರ್ ರಮೇಶ್ ಕುಮಾರ್ ಬಿಜೆಪಿಯವರಿಗೆ ಭರವಸೆ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದ ವಿಶ್ವಾಸಮತಯಾಚನೆಯ ಪ್ರಕ್ರಿಯೆಯನ್ನು ಇಂದೇ ಮುಗಿಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಬಿಜೆಪಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಶಾಸಕ ಮಾಧುಸ್ವಾಮಿ ನೇತೃತ್ವದಲ್ಲಿ ಬಿಜೆಪಿ ನಿಯೋಗ ಸ್ಪೀಕರ್ ರಮೇಶ್ ಅವರನ್ನು ಭೇಟಿ ಮಾಡಿ ವಿಶ್ವಾಸಮತಯಾಚನೆಗೆ ಸಮಯ ನಿಗದಿ ಮಾಡಿ, ಯಾವುದೇ ಕಾರಣಕ್ಕೂ ವಿಶ್ವಾಸಮತ ಯಾಚನೆ ಮುಂದೂಡದಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಸ್ಪೀಕರ್ ರಮೇಶ್ ಕುಮಾರ್ ಅವರು ಬಿಜೆಪಿ ನಿಯೋಗಕ್ಕೆ ಭರವಸೆ ನೀಡಿದ್ದು, ಇಂದೇ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿಸುವುದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಇಂದೇ ಸದ್ಯ ಇರುವ ಆಡಳಿತ ಪಕ್ಷ ಅಧಿಕಾರ ಮುಂದುವರೆಸುತ್ತಾರೋ ಅಥವಾ ಇಂದಿಗೆ ಕೊನೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ..
Comments