ದೋಸ್ತಿ ನಾಯಕರಿಗೆ ಬಿಗ್ ಶಾಕ್..!!! ಮತ್ತೆ 8 ಶಾಸಕರ ರಾಜೀನಾಮೆ..!!

ಕಳೆದ ಹದಿನೈದು ದಿನದಿಂದಲೂ ಕೂಡ ದೋಸ್ತಿ ಸರ್ಕಾರದ ಅತೃಪ್ತ ಶಾಸಕರ ರಾಜೀನಾಮೆ ಆಟ ಜೋರಾಗಿಯೇ ನಡೆಯುತ್ತಿದೆ.. ಒಂದು ಕಡೆ ವಿಶ್ವಾಸಮತ ಯಾಚನೆ ಮಾಡಲು ಮುಂದಾಗಿರುವ ದೋಸ್ತಿ ನಾಯಕರು ವಿಶ್ವಾಸಮತ ಯಾಚನೆ ಮಾಡದೆ ಹಿಂದೆ ಮುಂದು ನೋಡುತ್ತಿದ್ದಾರೆ. ಮತ್ತೊಂದು ಕಡೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ ಆಪರೇಷನ್ ಕಮಲ ಮಾಡಿ ನಮ್ಮ ಶಾಸಕರನ್ನು ಕರೆದುಕೊಂಡಿದ್ದಾರೆ ಎಂಬ ಆರೋಪವನ್ನು ದೋಸ್ತಿ ನಾಯಕರು ಬಿಜೆಪಿಯವರ ಮೇಲೆ ವರಿಸಿದ್ದಾರೆ.
ಇದೀಗ 15 ಶಾಸಕರು ರಾಜೀನಾಮೆ ನೀಡಿದ್ದರೂ ಮತ್ತಷ್ಟು ದೋಸ್ತಿ ಪಕ್ಷದ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ರಾಜೀನಾಮೆ ನೀಡಿದ ಶಾಸಕರ ಪೈಕಿ ಹಳೆ ಮೈಸೂರು ಭಾಗದವರು ಕೂಡ ಇದ್ದಾರೆ. ಈ ಭಾಗದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಉಪಚುನಾವಣೆ ನಡೆದರೆ ಇಲ್ಲಿ ಜಯಗಳಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಉತ್ತರ ಕರ್ನಾಟಕ ಭಾಗದ 8 ಶಾಸಕರನ್ನು ಸೆಳೆಯಲು ಬಿಜೆಪಿ ಇದೀಗ ಮುಂದಾಗಿದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಹಿಡಿತ ಹೆಚ್ಚಿದೆ. ಅದರಲ್ಲೂ ಹಲವಾರು ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕರಾಗಿದ್ದಾರೆ. ಹೀಗಾಗಿ 8 ಮಂದಿ ಲಿಂಗಾಯತ ಶಾಸಕರನ್ನು ಸೆಳೆಯಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ. ಬಿಜೆಪಿ ಅಂದುಕೊಂಡಂತೆ ಎಲ್ಲವೂ ಕೂಡ ಆದರೆ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ..ಎಂದು ಮೈತ್ರಿ ಸರ್ಕಾರ ಅಂತ್ಯವಾಗುತ್ತಾ, ಅಥವಾ ಉಳಿದುಕೊಳ್ಳುತ್ತಾ ಕಾದು ನೊಡಬೇಕಿದೆ.
Comments