ಕುತೂಹಲ ಮೂಡಿಸಿದೆ ಬಿಜೆಪಿ ನಡೆ..!! ಯಡಿಯೂರಪ್ಪನವರ ಮಾಸ್ಟರ್ ಪ್ಲ್ಯಾನ್ ಏನ್ ಗೊತ್ತಾ..?
ಸದ್ಯ ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಘಟನೆಗಳು ನಡೆಯುತ್ತಲೆ ಇವೆ… ದೋಸ್ತಿಯ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟ ಹಿನ್ನಲೆಯಲ್ಲಿ ಬಹುಮತ ಸಾಭೀತು ಪಡಿಸುವ ಸ್ಥಿತಿಯಲ್ಲಿ ದೋಸ್ತಿ ನಾಯಕರಿದ್ದಾರೆ.. ಗುರುವಾರದಿಂದಲೂ ಕೂಡ ವಿಶ್ವಾಸ ಮತ ಯಾಚನೆ ಮಾಡುವಲ್ಲೆ ಇದ್ದಾರೆ.. ರಾಜ್ಯಪಾಲರಿಂದ ಸಂದೇಶ ಬಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.. ಹಾಗಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಸೋಮವಾರಕ್ಕೆ ಮುಂದೂಡಿರುವುದರಿಂದ ಬಿಜೆಪಿ ಶಾಸಕರು ಸೋಮವಾರದವರೆಗೂ ಯಲಹಂಕ ಬಳಿಯ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸದ್ಯ ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಶಾಸಕರು ರೆಸಾರ್ಟ್ ನಲ್ಲಿ ತಂಗಲಿದ್ದಾರೆ ಎನ್ನಲಾಗಿದೆ. ಇನ್ನು ಸದ್ಯ ಇರುವ ಆಡಳಿತ ಪಕ್ಷವನ್ನು ಉಳಿಸಿಕೊಳ್ಳಲು ಅಡ್ಡದಾರಿ ಹಿಡಿಯುವ ದುರುದ್ದೇಶದಿಂದ ವಿಶ್ವಾಸಮತ ನಿರ್ಣಯವನ್ನು ದೋಸ್ತಿ ನಾಯಲರು ಬೇಕು ಬೇಕಂತೆ ವಿಳಂಬ ಮಾಡುತ್ತಿದ್ದಾರೆ ಎಂದು ವಿರುದ್ಧ ಬಿಜೆಪಿ ಪಕ್ಷದವರು ಆರೋಪ ಮಾಡಿದ್ದಾರೆ.. ಒಟ್ಟಿನಲ್ಲಿ ದೋಸ್ತಿ ನಾಯಕರು ಮತ್ತು ಬಿಜೆಪಿ ಪಕ್ಷದವರ ನಡುವೆ ಕುರ್ಚಿಗಾಗಿ ಸಮರ ಏರ್ಪಟ್ಟಿದೆ.
Comments