ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸಮತಯಾಚನೆಗೆ ಡೆಡ್ ಲೈನ್
ಗುರುವಾರವೇ ನಡೆಯಬೇಕಿದ್ದ ವಿಶ್ವಾಸಮತಯಾಚನೆ ಇನ್ನೂ ಕೂಡ ಮುಗಿದಿಲ್ಲ… ಸಾಕಷ್ಟು ವಾದ ವಿವಾದಗಳ ನಡುವೆಯೂ ಕೂಡ ಇನ್ನೂ ಕಲಾಪ ನಡೆಯುತ್ತಲೆ ಇದೆ.. ಇಂದು ಮದ್ಯಾಹ್ನ 1.30ರ ಒಳಗೆ ವಿಶ್ವಾಸಮತ ಯಾಚನೆ ಮಾಡಿ ಮುಗಿಸಬೇಕು ಎಂದು ರಾಜ್ಯಪಾಲರು ಸಿಎಂ ಕುಮಾರಸ್ವಾಮಿಗೆ ತಿಳಿಸಿದರು.. ಆದರೆ ರಾಜ್ಯಪಾಲರು ಕೊಟ್ಟ ಗಡುವನ್ನು ಸರ್ಕಾರ ಮೀರಿದೆ. ಹಾಗಾಗಿ ರಾಜ್ಯಪಾಲರು ಕುಮಾರಸ್ವಾಮಿಯವರಿಗೆ ಮತ್ತೊಂದು ಹೊಸ ಡೆಡ್ ಲೈನ್ ಅನ್ನು ಕೊಟ್ಟಿದ್ದಾರೆ.
ವಿಶ್ವಾಸ ಮತಯಾಚನೆ ಬಗ್ಗೆ ರಾಜ್ಯಪಾಲರಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಗಡುವು ಕೇಳಿದ ಹಿನ್ನಲೆಯಲ್ಲಿ ಇಂದು ಸಂಜೆ 6ರೊಳಗೆ ವಿಶ್ವಾಸಮತಯಾಚನೆಗೆ ರಾಜ್ಯಪಾಲರು ಸಿಎಂಗೆ ಹೊಸ ಡೆಡ್ ಲೈನ್ ಕೊಟ್ಟಿದ್ದಾರೆ. 1:30 ಆದರೂ ವೋಟ್ ಮಾತ್ರ ನಡೆಯಲೇ ಇಲ್ಲ. ಆ ಸಮಯದಲ್ಲಿ ಯಡಿಯೂರಪ್ಪನವರು ಎದ್ದು ನಿಂತು ಸ್ಪೀಕರ್ ಅವರಲ್ಲಿ ಈ ಪ್ರಕ್ರಿಯೆ ಕೂಡಲೇ ಮುಗಿಸಿಕೊಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾದರೂ ಯಡಿಯೂರಪ್ಪ ಮನವಿಗೆ ಸ್ಪೀಕರ್, ನನಗೆ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದಿರುವುದು ಸಿಎಂ ಅವರಿಗೆ. ಕಲಾಪ ಹೇಗೆ ನಡೆಯಬೇಕೋ ಹಾಗೆ ನಡೆಸುತ್ತೇನೆ. ಚರ್ಚೆಯಾದ ನಂತರವಷ್ಟೆ ಮತಕ್ಕೆ ಹಾಕಲಾಗುವುದು ಎಂದು ಸ್ಪೀಕರ್ ತಿಳಿಸಿದರು. ಇಂದು ಸಂಜೆ 6 ರ ಒಳಗೆ ವಿಶ್ವಾಸ ಮತಯಾಚನೆ ಮಾಡಲೇ ಬೇಕಾಗಿದೆ.. ದೋಸ್ತಿಯು ತನ್ನ ಸರ್ಕಾರವನ್ನು ಉಳಿಸಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Comments