ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ..!!  ಏನ್ ಗೊತ್ತಾ..?

19 Jul 2019 3:40 PM | Politics
1023 Report

ರಾಜ್ಯ ಸರ್ಕಾರವು ಸದ್ಯ ಅತಂತ್ರ ಸ್ಥಿತಿಯಲ್ಲಿದ್ದು, ಇಂದು ರಾಜ್ಯ ಸರ್ಕಾರದ ಭವಿಷ್ಯ ನಿರ್ಧಾರವಾಗಬೇಕಿತ್ತು.. ಆದರೆ ವಿಶ್ವಾಸಮತ ಯಾಚನೆ ಮಾಡಲು ದೋಸ್ತಿಗಳು ಒಪ್ಪಲಿಲ್ಲ.. ಇದರ ನಡುವೆ ಸದ್ಯ ರಾಜ್ಯ ಸರ್ಕಾರ ಮತ್ತೊಂದು ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರು ಕಚೇರಿಗಳಲ್ಲಿ ಐಡಿ ಕಾರ್ಡ್ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಾರ್ವಜನಿಕರು ಸಾಕಷ್ಟು ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಆಗಾಗ ಭೇಟಿ ನಿಡುತ್ತಿರುತ್ತಾರೆ. ಆ ಸಂದರ್ಭದಲ್ಲಿ  ಅಧಿಕಾರಿಗಳ ಹೆಸರು ಹಾಗೂ  ಹುದ್ದೆಗಳ ಗುರುತು ಸಾರ್ವಜನಿಕರಿಗೆ ಸಿಗದೇ ಪರದಾಡುವಂತಹ ಸಂದರ್ಭ  ಸಾಮಾನ್ಯವಾಗಿದೆ. ಇದರಿಂದ ನಿಗದಿತ ವೇಳೆಗೆ ಕೆಲಸ, ಕಾರ್ಯಗಳಾಗದೆ ಹಾಗೂ ಸಂಬಂಧಪಟ್ಟ ಅಧಿಕಾರಿ ಮತ್ತು ನೌಕರರನ್ನು ಭೇಟಿ ಮಾಡಲಾಗದೇ ಸಾರ್ವಜನಿಕರು ಬರಿಗೈಲಿ ವಾಪಸ್ ತೆರಳಿದ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಹಾಗಾಗಿ ಕೆಲಸ ಕಾರ್ಯಗಳ ನಿಮಿತ್ತ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರು ಅಧಿಕಾರಿಗಳು ಮತ್ತು ನೌಕರರನ್ನು ಗುರುತಿಸಲು ಅನುಕೂಲವಾಗುವಂತೆ ಗುರುತಿನ ಚೀಟಿಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಕೆ. ರವೀಂದ್ರ ಆದೇಶ ಹೊರಡಿಸಿದ್ದಾರೆ.. ರಾಜ್ಯ ಸರ್ಕಾರಿ ನೌಕರರು ಐಡಿ ಕಾರ್ಡ್ ಗಳನ್ನು ಹಾಕಿಕೊಳ್ಳಬೇಕು ಎಂಬ ಆದೇಶವನ್ನು ತಿಳಿಸಿದ್ದಾರೆ.  

Edited By

Manjula M

Reported By

Manjula M

Comments