ಸದನ ಕಲಾಪದಲ್ಲಿ ಸ್ಪೋಟಕ ಆರೋಪ ವರಿಸಿದ ಶಾಸಕ ಶ್ರೀನಿವಾಸ್ ಗೌಡ..!! ಯಾರ ಮೇಲೆ ಗೊತ್ತಾ..?

ಸದನದಲ್ಲಿ ಸದ್ಯ ಕಲಾಪದಲ್ಲಿ ಬೇಡದೇ ಇರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು 1.30 ರವೊಳಗೆ ಯಾವುದು ಕೂಡ ಅಂತ್ಯವಾಗುವ ರೀತಿಯಲ್ಲಿ ಕಾಣಿಸುತ್ತಿಲ್ಲ.. ಸದ್ಯ ಸಮಯವಕಾಶ ಬೇಕು ಎಂದು ಎಲ್ಲರೂ ಕೇಳುತ್ತಿದ್ದಾರೆ. ಈ ನಡುವೆ ಆರೋಪ ಮತ್ತು ಪ್ರತ್ಯಾರೋಪಗಳು ಸಹ ಕೇಳಿ ಬರುತ್ತಿವೆ.. ಇದೀಗ ಅಧ್ಯಕ್ಷರೇ ಬಿಜೆಪಿಯ ಮಲ್ಲೇಶ್ವರಂ ಶಾಸಕ ಅಶ್ವತ್ ನಾರಾಯಣ, ಚೆನ್ನಪಟ್ಟಣದ ಮಾಜಿ ಶಾಸಕ ಸಿಪಿ ಯೋಗೀಶ್ವರ್ ಹಾಗು ವಿಶ್ವನಾಥ್ ಯಲಹಂಕದವರು ನಮ್ಮ ಮನೆಗೆ ಬಂದಿದ್ದರು ಎಂದಿದ್ದಾರೆ.
ಅಷ್ಟೆ ಅಲ್ಲದೆ ನಮ್ಮ ಮನೆಗೆ ಬಂದು ಬೆಂಗಳೂರಿನಲ್ಲಿ ಕಂಪನಿಯವರು ಕೊಟ್ಟಿರುವ ಮನೆಗೆ 5 ಕೋಟಿ ತಂದು ಕೊಟ್ಟರು. ನಾನು ತಗೊಳ್ಳೋದಿಲ್ಲ ಎಂದರೂ ಮನೆಗೆ ತಂದು ಇಟ್ಟು ಹೋದರು ಎಂದು ಶಾಸಕ ಶ್ರೀನಿವಾಸ್ ಗೌಡ ಸ್ಪೋಟಕ ಬಾಂಬ್ ಅನ್ನು ಸದನದಲ್ಲಿ ಸಿಡಿಸಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ರಾಜಕೀಯ ಹೊಲಸು ತನಕ್ಕೆ ಸದನದಲ್ಲಿ ಕಣ್ಣೀರಿಟ್ಟ ವೇಳೆ ಮಧ್ಯ ಪ್ರವೇಶ ಮಾಡಿದ ಶಾಸಕ ಶ್ರೀನಿವಾಸ ಗೌಡ ಅವರು ಈ ವಿಷಯವನ್ನು ಬಹಿರಂಗ ಪಡಿಸಿದರು.. ಇನ್ನೂ ಸದನದ ಕಲಾಪದಲ್ಲಿ ಯಾವ್ಯಾವ ವಿಚಾರಗಳು ಬಹಿರಂಗಗೊಳ್ಳುತ್ತವೆಯೋ ಗೊತ್ತಿಲ್ಲ…ಹೇಳಿದ ಸಮಯಕ್ಕೆ ವಿಶ್ವಾಸಮತಯಾಚನೆ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
Comments