ಸ್ಪೀಕರ್ ರಮೇಶ್ ಕುಮಾರ್ ಮೈತ್ರಿ ಸರ್ಕಾರದ ಏಜೆಂಟ್..!! ಹೀಗ್ ಹೇಳಿದ್ದು ಯಾರ್ ಗೊತ್ತಾ..?

ಸುಮಾರು ಒಂದು ವಾರದಿಂದ ರಾಜ್ಯ ರಾಜಕಾರಣದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಆಟ ಜೋರಾಗಿಯೇ ನಡೆಯುತ್ತಿದೆ. ಅತೃಪ್ತ ಶಾಸಕರನ್ನು ಮನವೊಲಿಸುವಲ್ಲಿ ದೋಸ್ತಿಗಳು ವಿಫಲವಾದ ಕಾರಣ ವಿಶ್ವಾಸ ಮತ ಯಾಚನೆ ಮಾಡಬೇಕಾಗಿದೆ.. ನಿಗಧಿಯಾಗಿದ್ದ ಮೂಹೂರ್ತದಲ್ಲಿ ಬಹುಮತ ಸಾಬೀತು ಪಡಿಸಿಲಿಲ್ಲ.. ಹಾಗಾಗಿ ಇಂದು 1.30 ರೊಳಗೆ ಬಹುಮತ ಸಾಭಿತು ಪಡಿಸಲೇ ಬೇಕಾಗಿದೆ.
ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು ಕಾಂಗ್ರೆಸ್ ಹಾಗೂ ಸರ್ಕಾರದ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪವನ್ನು ಮಾಡಿದ್ದಾರೆ. ನಾಡದೇವತೆಯಾದ ಚಾಮುಂಡೇಶ್ವರಿ ದರ್ಶನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ಬರ ಹಾಗು ಜಾನುವಾರುಗಳಿಗೆ ಮೇವಿನ ಕೊರತೆ ಇದ್ದರೂ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ತಿಳಿಸಿದರು. ಅಲ್ಪಮತ ಸರ್ಕಾರವಿದ್ದರೂ ಸಿಎಂ ಸ್ಪೀಕರ್ ಮೇಲೆ ಒತ್ತಡ ಹಾಕಿ ಕೆಲಸ ಮಾಡುತ್ತಿದ್ದು, ಈ ಸರ್ಕಾರ ಸುಪ್ರೀಂಕೋರ್ಟ್ ಗೆ, ರಾಜ್ಯಪಾಲರಿಗೆ ಹಾಗೂ ಸಂವಿಧಾನಕ್ಕೆ ಗೌರವ ಕೊಡುತ್ತಿಲ್ಲ. ಪ್ರಜಾಪ್ರಭುತ್ವದ ವಿರುದ್ಧವಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಏನೇ ಆದರೂ ಕೂಡ ಇಂದು ವಿಶ್ವಾಸ ಮತ ಯಾಚನೆ ಮಾಡಲೇ ಬೇಕಾಗಿದೆ. ದೋಸ್ತಿ ಸರ್ಕಾರ ಉಳಿದುಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Comments