ದೋಸ್ತಿ ನಾಯಕರಿಗೆ ರಾಜ್ಯಪಾಲರಿಂದ ಬಿಗ್ ಶಾಕ್..!!
ರಾಜ್ಯ ಸರ್ಕಾರ ಸದ್ಯ ಅತಂತ್ರ ಸ್ಥಿತಿಯಲ್ಲಿದ್ದು ನಿನ್ನೆ ವಿಶ್ವಾಸಮತ ಯಾಚನೆ ಮಾಡಬೇಕಿತ್ತು.. ಆದರೆ ಸಾಕಷ್ಟು ವಿಷಯಗಳನ್ನು ಅಡ್ಡ ತಂದು ವಿಶ್ವಾಸಮತ ಯಾಚನೆಯನ್ನು ದೋಸ್ತಿ ಸರ್ಕಾರ ಮಾಡಲಿಲ್ಲ.. ಆಡಳಿತ ಪಕ್ಷ ಮತ್ತು ಪ್ರತಿಪಕ್ಷದವರಿಬ್ಬರು ಕೂಡ ಸಾಕಷ್ಟು ವಾದ ವಿವಾದಗಳನ್ನು ಮಾಡಿದರು.. ಕಲಾಪದಲ್ಲಿ ಗದ್ದಲ ಶುರುವಾಗುತ್ತಿದಂತೆ ವಿಶೇಷಾಧಿಕಾರಿಗಳಿಂದ ಸಂದೇಶವೊಂದು ಬಂತು.. ಇಂದೇ ವಿಶ್ವಾಸಮತ ಯಾಚನೆ ಮಾಡಬೇಕು ಎಂದು.. ಆದರೆ ಇದಕ್ಕೆ ದೋಸ್ತಿಗಳು ಒಪ್ಪಲಿಲ್ಲ…
ಹಾಗಾಗಿ ಇಂದು ವಿಶ್ವಾಸಮತ ಯಾಚನೆ ಮಾಡುವಂತೆ ರಾಜ್ಯಪಾಲರು ಸಿಎಂ ಕುಮಾರಸ್ವಾಮಿಗೆ ಸೂಚನೆಯನ್ನು ನೀಡಿದ್ದಾರೆ. ವಿಶ್ವಾಸ ಮತಯಾಚನೆ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದು, ಸದನದಲ್ಲಿ ದೋಸ್ತಿ ನಾಯಕರು ಕಾಲಹರಣ ಮಾಡಿದ್ದು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.ರಾಜ್ಯಪಾಲರು ಮಧ್ಯ ಪ್ರವೇಶಿಸಿದ್ದು ಶುಕ್ರವಾರ ಮಧ್ಯಾಹ್ನದೊಳಗೆ ಬಹುಮತ ಸಾಬೀತುಪಡಿಸುವಂತೆ ನಿರ್ದೇಶಿಸಿದ್ದಾರೆ. ಶಾಸಕರ ವಿಪ್ ವಿಚಾರದಲ್ಲಿ ಆಡಳಿತ ಪಕ್ಷದ ಸದಸ್ಯರು ಚರ್ಚೆ ನಡೆಸಿ ಕಾಲಹರಣ ಮಾಡಿದ್ದು, ಇದೇ ಗ್ಯಾಪ್ ನಲ್ಲಿ ಅತೃಪ್ತ ಶಾಸಕರ ಮನವೊಲಿಸಿ ಕರೆತರುವ ಮಾಡಿಕೊಳ್ಳಲಾಗಿತ್ತು. ರಾಜ್ಯಪಾಲರ ಮಧ್ಯಪ್ರವೇಶದಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಲೆಕ್ಕಾಚಾರ ಉಲ್ಟಾ ಆಗಿದೆ. ಒಟ್ಟಿನಲ್ಲಿ ಇಂದು ಕುಮಾರಸ್ವಾಮಿಯವರು ಬಹುಮತ ಸಾಭೀತು ಪಡಿಸಲೇ ಬೇಕಾಗಿದೆ. ಅತೃಪ್ತ ಶಾಸಕರು ಮನ ಬದಲಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Comments