ಕಣ್ಮರೆಯಾದ ಕಾಂಗ್ರೆಸ್’ನ ಇಬ್ಬರು ಶಾಸಕರು..!! ವಿಶ್ವಾಸಮತಯಾಚನೆ ಗತಿ..?!
ರಾಜ್ಯ ರಾಜಕಾರಣದಲ್ಲಿ ಇತ್ತಿಚಿಗೆ ಸಾಕಷ್ಟು ಬದಲಾವಣೆಗಳು ಕಾಣಿಸುತ್ತಿವೆ.. ದೋಸ್ತಿ ಸರ್ಕಾರಕ್ಕೆ ಕೈ ಕೊಟ್ಟು ಅತೃಪ್ತ ಶಾಸಕರು ಈಗಾಗಲೇ ರಾಜೀನಾಮೆಯನ್ನು ನೀಡಿದ್ದಾರೆ. ಇಲ್ಲಿಯವರೆಗೂ ಕೂಡ 15 ಶಾಸಕರನ್ನು ಕಳೆದುಕೊಂಡಿರುವ ದೋಸ್ತಿ ಸರ್ಕಾರ ಇಂದು ವಿಶ್ವಾಸಮತ ಯಾಚನೆ ಮಾಡಲು ಮುಂದಾಗಿದೆ. ಆದರೆ ಮತಯಾಚನೆ ಮುನ್ನವೆ ದೋಸ್ತಿಗೆ ಮತ್ತೊಂದು ಆಘಾತವಾಗಿದೆ.
ರೆಸಾರ್ಟ್ ನಲ್ಲಿದ್ದ ಇಬ್ಬರು ಶಾಸಕರು ರಾತ್ರೋರಾತ್ರಿ ಕಣ್ಮರೆಯಾಗಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ಆಘಾತ ಉಂಟು ಮಾಡಿದೆ. ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರುಗಳು ಕಾಂಗ್ರೆಸ್ ಶಾಸಕರು ತಂಗಿರುವ ಪ್ರಕೃತಿ ರೆಸಾರ್ಟ್‌ನಿಂದ ಕಾಣೆಯಾಗಿದ್ದಾರೆ ಎನ್ನಲಾಗುತ್ತಿದೆ. ನೆನ್ನೆ ರಾತ್ರಿ ಹೊರಗೆ ಹೋಗಿ ಬರುವೆವು ಎಂದು ಹೇಳಿ ಹೋಗಿದ್ದ ಶಾಸಕರಿಬ್ಬರು ಕಣ್ಮರೆಯಾಗಿದ್ದಾರೆ. ಇಬ್ಬರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಈ ಇಬ್ಬರು ಶಾಸಕರು ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ… ಹೀಗಾಗಿ ಅವರು ಕೂಡ ಅತೃಪ್ತ ಶಾಸಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರು ತಾವು ವಿಧಾನಸಭೆಗೆ ಹಾಜರಾಗುವುದಿಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ. ಒಟ್ಟಾರೆಯಾಗಿ ವಿಶ್ವಾಸಮತ ಯಾಚನೆಯಲ್ಲಿ ಏನಾಗುತ್ತದೆಯೋ ಎಂಬ ಕುತೂಹಲ ಎಲ್ಲರಲ್ಲಿಯೂ ಕೂಡ ಇದೆ.. ಶಾಸಕರ ಒಲವು ಯಾರ ಮೇಲಿದೆಯೋ ಕಾದು ನೋಡಬೇಕಿದೆ.
Comments