ಮೈತ್ರಿ ಸರ್ಕಾರ ಪತನಕ್ಕೆ ಈ ಜೆಡಿಎಸ್ ನ ಪ್ರಭಾವಿ ಶಾಸಕನೇ ಕಾರಣವಂತೆ..!!!

ಮೈತ್ರಿ ಸರ್ಕಾರ ಸದ್ಯ ಅತಂತ್ರ ಸ್ಥಿತಿಯಲ್ಲಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಿರುವುದರಿಂದ ದೋಸ್ತಿಗಳಿಗೆ ತಲೆ ನೋವು ಉಂಟಾಗಿದೆ.. ಗುರುವಾರ ಸರ್ಕಾರವನ್ನು ಉಳಿಸಿಕೊಳ್ಳಲು ಮತಯಾಚನೆ ಮಾಡುತ್ತಿದ್ದಾರೆ.. ಆದರೆ ಇದೆಲ್ಲದರ ನಡುವೆ ಸರ್ಕಾರದ ಈ ಸ್ಥಿತಿಗೆ ಸದ್ಯ ರೇವಣ್ಣ ಅವರೇ ಕಾರಣ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅವರು ರೇವಣ್ಣ ಅಲ್ಲಾ ರಾವಣ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುವ ವಿಚಾರ ಕುರಿತು ಮಾತನಾಡಿದ ಮಾಜಿ ಶಾಸಕ ರಾಜಣ್ಣ, ಸರ್ಕಾರವೇ ಇಲ್ಲ ಅಂದ ಮೇಲೆ ಬಹುಮತ ಸಾಬೀತಿನ ಫಲಿತಾಂಶ ಯಾಕೆ ಕೇಳ್ತಿರಾ? ಚುನಾವಣೆಯಲ್ಲಿ ನಿಲ್ಲೋ ಎಲ್ಲರೂ ಗೆಲ್ತೀವೆ ಅಂತಲೇ ಹೇಳೋದು. ಸೋಲ್ತೀವಿ ಅಂತಾ ಯಾರೂ ಹೇಳಲ್ಲಾ. ಫಲಿತಾಂಶ ಬಂದ್ಮೇಲೆ ಯಾರು ಸೋಲ್ತಾರೆ ಯಾರು ಗೆಲ್ತಾರೆ ಅಂತಾ ಗೊತ್ತಾಗೋದು ಎಂದು ತಿಳಿಸಿದರು. ರೇವಣ್ಣನ ಕಾಟಕ್ಕೆ ಯಾವ ಶಾಸಕರು ಕೂಡ ವಾಪಸ್ ಬರೋದಿಲ್ಲಾ. ರೇವಣ್ಣ ಮಾತ್ರ ಅವರ ಹೆಸರು, ಅದರ ಬದಲಿಗೆ ರಾವಣ ಅಂತಾ ಇಡ್ಬೇಕಿತ್ತು,ಅದ್ಯಾಕೋ ಅವ್ರಪ್ಪ ರೇವಣ್ಣ ಅಂತಾ ಇಟ್ಬಿಟ್ಟಿದ್ದಾರೆ. ಸರ್ಕಾರ ಹೋಗೋಕೆ ರೇವಣ್ಣನೇ ಕಾರಣ ಎಂದು ರಾಜಣ್ಣ ಆರೋಪಿಸಿದ್ದಾರೆ. ಒಟ್ಟಾರೆಯಾಗಿ ದೋಸ್ತಿಯಲ್ಲಿಯೇ ಒಳಗೊಳಗೆ ಸಾಕಷ್ಟು ಒಳಜಗಳಗಳು ನಡೆಯುತ್ತಿವೆ.. ಇದೆಲ್ಲಾ ಎಲ್ಲಿಗೆ ಹೋಗಿ ಮುಟ್ಟುತ್ತೋ ಸರ್ಕಾರ ರಚನೆಯನ್ನು ಯಾವ ಪಕ್ಷದವರು ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
Comments