ದೋಸ್ತಿ ಸರ್ಕಾರದ ಭವಿಷ್ಯ ನಿರ್ಧಾರಕ್ಕೆ ಡೇಟ್ ಫಿಕ್ಸ್..!!

ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಕಾಣುತ್ತಿವೆ. ಒಂದು ಕಡೆ ಅತೃಪ್ತ ಶಾಸಕರ ರಾಜೀನಾಮೆ ಆಟ.. ಮತ್ತೊಂದು ಕಡೆ ಅತೃಪ್ತ ಶಾಸಕರನ್ನು ಮನವೊಲಿಸಲು ದೋಸ್ತಿಗಳು ಪಡುತ್ತಿರುವ ಪಾಡು ಎಲ್ಲವೂ ಕೂಡ ರಾಜಕೀಯದಲ್ಲಿ ನಗೆಪಾಟಲಿನಂತೆ ಕಾಣುತ್ತಿದೆ.. ಮತ್ತೊಂದು ಕಡೆ ಬಿಜೆಪಿ ಪಕ್ಷದವರು ಸಮ್ಮಿಶ್ರ ಸರ್ಕಾರ ಪತನವಾಗುವುದು ಗ್ಯಾರೆಂಟಿ.. ಬಿಜೆಪಿಯವರು ನಮ್ಮ ಸರ್ಕಾರವೇ ರಚನೆಯಾಗುವುದು ಎಂದು ವಿಶ್ವಾಸದಿಂದ ಇದ್ದಾರೆ.
ಕೊನೆಗೂ ದೋಸ್ತಿಯ ಅತೃಪ್ತ ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದಿರುವ ದೋಸ್ತಿ ಸರ್ಕಾರದ ಭವಿಷ್ಯ ನಿಗಧಿಗೆ ಸಮಯ ಇದೀಗ ನಿಗಧಿಯಾಗಿದೆ. ಮೈತ್ರಿ ಸರ್ಕಾರಕ್ಕೆ ಬಹುಮತ ಸಾಭೀತು ಪಡಿಸಲು ಗುರುವಾರ ಬೆಳಿಗ್ಗೆ 11ಕ್ಕೆ ಎಂಬ ನಿರ್ಧಾರಕ್ಕೆ ಬರಲಾಗಿದೆ. ನಾಳೆ ಅತೃಪ್ತ ಶಾಸಕರ ರಾಜೀನಾಮೆ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳಲಿದೆ. ಹೀಗಾಗಿ ಇಂದೇ ಬಹುಮತ ಸಾಭೀತು ಪಡಿಸಬೇಕು ಎಂಬ ಬಿಜೆಪಿ ಪಟ್ಟಿಗೆ ಒಪ್ಪದ ದೋಸ್ತಿಗಳ ನಿಲುವಿನಿಂದಾಗಿ, ಸ್ಪೀಕರ್ ರಮೇಶ್ ಕುಮಾರ್ ಕಲಾಪ ಸಲಹ ಸಮಿತಿಯ ಸಭೆಯಲ್ಲಿ ಗುರುವಾರ ಬೆಳಿಗ್ಗೆ 11ಕ್ಕೆ ದೋಸ್ತಿಗಳು ಬಹುಮತ ಸಾಭೀತು ಪಡಿಸಲು ಸಮಯ ನಿಗಧಿ ಮಾಡಿ ತಿಳಿಸಿದ್ದಾರೆ. ಒಟ್ಟಿನಲ್ಲಿ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಬಹುಮತ ಸಾಭೀತು ಪಡಿಸಲು ಮುಂದಾಗಿದ್ದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ.. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರದಿ.. ಗುರುವಾರ 11 ಗಂಟೆಗೆ ದೋಸ್ತಿ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.
Comments