ಕಮಲ ಪಾಳಯದ ಮಾಸ್ಟರ್ ಫ್ಲಾನ್..!! ದೋಸ್ತಿ ವಿರುದ್ಧ ಬಿಜೆಪಿ ಬ್ರಹ್ಮಾಸ್ತ್ರ ಪ್ರಯೋಗ ..!!

15 Jul 2019 11:43 AM | Politics
720 Report

ದೋಸ್ತಿ ಸರ್ಕಾರವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದು ದೋಸ್ತಿ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದು, ಸ್ಪೀಕರ್ ರಾಜೀನಾಮೆ ಅಂಗೀಕರಿಸುತ್ತಾರೆಯೇ ಇಲ್ಲವೇ ಎನ್ನುವುದು ಸದ್ಯ ಕುತೂಹಲವನ್ನು ಮೂಡಿಸಿದೆ.    

ಮಂಗಳವಾರದವರೆಗೂ ಸುಪ್ರೀಂಕೋರ್ಟ್ ಹಾಗೆ ಇರಲು ಸೂಚನೆಯನ್ನು ನೀಡಿದೆ. ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವುದಾಗಿ ತಿಳಿಸಿ ಎಲ್ಲರಲ್ಲಿಯೂ ಅಚ್ಚರಿಯನ್ನು ಮೂಡಿಸಿದ್ದಾರೆ. ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ಸದ್ಯ ವಿಫಲವಾಗಿದೆ. ಪ್ರಯತ್ನ ವಿಫಲವಾಗಿರುವುದ್ದರಿಂದ ಬಿಜೆಪಿ ಇದೀಗ ದೋಸ್ತಿ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.. ಸದ್ಯ16 ಶಾಸಕರು ರಾಜೀನಾಮೆ ನೀಡಿದ್ದು ದೋಸ್ತಿ ಸರ್ಕಾರ ಸಂಕಷ್ಟದಲ್ಲಿದೆ. ದೋಸ್ತಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಬಿಜೆಪಿ ನಾಯಕರು ಸಭೆ ಸೇರಿ ಚರ್ಚೆ ನಡೆಸಿದ್ದು, ಇಂದೇ ವಿಶ್ವಾಸಮತ ಯಾಚಿಸುವಂತೆ ಕಲಾಪದಲ್ಲಿ ಒತ್ತಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.. ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದೆ ಇದಕ್ಕೆಲ್ಲಾ ಕಾರಣ ಎನ್ನಬಹುದಾಗಿದೆ.

Edited By

Manjula M

Reported By

Manjula M

Comments