ಟ್ರಬಲ್ ಶೂಟರ್ ಗೆ ಸಂಕಷ್ಟ..!!! ಮುಂಬೈನಲ್ಲಿ ಸಚಿವ ಡಿಕೆ ಶಿವಕುಮಾರ್ ಪೊಲೀಸರ ವಶಕ್ಕೆ..!!
ದೋಸ್ತಿ ಸರ್ಕಾರದಲ್ಲಿ ಈಗಾಗಲೇ ಬಿರುಕು ಹೆಚ್ಚಾಗಿದೆ.. ಒಬ್ಬರ ಮೇಲೊಬ್ಬರು ಪೈಪೋಟಿಯಂತೆ ರಾಜೀನಾಮೆ ನೀಡುತ್ತಿದ್ದಾರೆ..ಅಷ್ಟೆ ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟೆ ಸಮಸ್ಯೆ ಬಂದರೂ ಕೂಡ ಅದನ್ನೆಲ್ಲಾ ನಿಭಾಯಿಸಿಕೊಂಡು ಬಂದಿರುವ ಡಿಕೆ ಶಿವಕುಮಾರ್ ಅವರೇ ಟ್ರಬಲ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಮಧ್ಯಸ್ಥಿಕೆಯನ್ನು ವಹಿಸಿಕೊಳ್ಳುವಲ್ಲಿ ಸದಾ ಮುಂದಿರುತ್ತಿದ್ದರು.
ಕಳೆದ 6 ಗಂಟೆಯಿಂದ ಅತೃಪ್ತ, ಬಂಡಾಯ ಶಾಸಕರು, ರಾಜೀನಾಮೆ ನೀಡಿ ಹೋಟೆಲ್ ನಲ್ಲಿ ಉಳಿದಿರುವ ರಿನೈಸೆನ್ಸ್ ಹೋಟೆಲ್ ಮುಂದೆ ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇಂದು ಬೆಳಿಗ್ಗೆಯಿಂದ ಅತೃಪ್ತರು ತಂಗಿದ್ದ ಮುಂಬೈನ್ ರಿನೈಸೆನ್ಸ್ ಹೋಟೆಲ್ ಗೆ ತಾವು ರೂಂ ಬುಕ್ ಮಾಡಿರುವುದಾಗಿ ತೆರಳಿ, ಆ ಮೂಲಕ ಬಂಡಾಯ, ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ, ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಅವರನ್ನು ಬಂಧಿಸಿ, ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಟ್ರಬಲ್ ಶೂಟರ್ ಎನ್ನುತ್ತಿದ್ದ ಡಿಕೆ ಶಿವಕುಮಾರ್ ಅವರಿಗೆ ಟ್ರಬಲ್ ಶುರುವಾಗಿರುವ ರೀತಿಯಲ್ಲಿ ಕಾಣುತ್ತಿದೆ.. ಮುಂಬರುವ ದಿನಗಳಲ್ಲಿ ರಾಜಕೀಯದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
Comments