ಶಾಸಕರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಟ್ರಬಲ್ ನಲ್ಲಿ ಸಿಲುಕಿಕೊಂಡ ಟ್ರಬಲ್ ಶೂಟರ್...!
ದೋಸ್ತಿ ಸರ್ಕಾರದಲ್ಲಿ ಈಗಾಗಲೇ ಬಿರುಕು ಹೆಚ್ಚಾಗಿದೆ.. ಒಬ್ಬರ ಮೇಲೊಬ್ಬರು ಪೈಪೋಟಿಯಂತೆ ರಾಜೀನಾಮೆ ನೀಡುತ್ತಿದ್ದಾರೆ..ಅಷ್ಟೆ ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟೆ ಸಮಸ್ಯೆ ಬಂದರೂ ಕೂಡ ಅದನ್ನೆಲ್ಲಾ ನಿಭಾಯಿಸಿಕೊಂಡು ಬಂದಿರುವ ಡಿಕೆ ಶಿವಕುಮಾರ್ ಅವರೇ ಟ್ರಬಲ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಮಧ್ಯಸ್ಥಿಕೆಯನ್ನು ವಹಿಸಿಕೊಳ್ಳುವಲ್ಲಿ ಸದಾ ಮುಂದಿರುತ್ತಿದ್ದರು.
ಆದರೆ ಸೋಮವಾರ ಪಕ್ಷೇತರ ಶಾಸಕ ಎಚ್,ನಾಗೇಶ್ ರಾಜಿನಾಮೆ ನೀಡಿದ್ದು ಡಿ.ಕೆ ಶಿವಕುಮಾರ್ ಗೆ ಆಘಾತ ತಂದಿದೆ., ವಿಮಾನ ನಿಲ್ದಾಣದವರೆಗೂ ಶಾಸಕ ನಾಗೇಶ್ ಅವರನ್ನು ಡಿ.ಕೆ ಶಿವಕುಮಾರ್ ಹಿಂಬಾಲಿಸಿದ್ದರು, ಆದರೆ ಕೇವಲ 5 ನಿಮಿಷ ತಡವಾಗಿದ್ದರಿಂದ ನಾಗೇಶ್ ಡಿಕೆಶಿ ಕೈಗೆ ಸಿಗದೇ ಹೋಗಿದ್ದಾರೆ. ಸ್ಪೀಕರ್ ಕಚೇರಿಗೆ ಆಗಮಿಸಿದ ಶಿವಕುಮಾರ್, ರಾಮಲಿಂಗಾ ರೆಡ್ಡಿ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಮತ್ತು ಮುನಿರತ್ನ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ.ನಾಲ್ಕು ಬಂಡಾಯ ಶಾಸಕರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಮುನ್ನ ಡಿಕೆ ಶಿವಕುಮಾರ್ ಮುನಿರತ್ನ ರಾಜಿನಾಮೆ ಪತ್ರವನ್ನು ಹರಿದು ಹಾಕಿದ್ದರು. ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆದರೂ ಕೂಡ ಮುಂದೆ ಯಾವ ರೀತಿಯ ತಿರುವವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments