ರಾಜೀನಾಮೆ ಅಖಾಡಕ್ಕೆ ಎಂಟ್ರಿ ಕೊಟ್ಟ ದೊಡ್ಡ ಗೌಡರು..!!

ಯಾಕೋ ದೋಸ್ತಿ ಸರ್ಕಾರಕ್ಕೆ ಆಷಾಡದ ಗಾಳಿ ಜೋರಾಗಿಯೇ ಬೀಸಿದಂತೆ ಕಾಣುತ್ತಿದೆ... ದೋಸ್ತಿ ನಾಯಕರ ರಾಜೀನಾಮೆ ಪರ್ವ ಜೋರಾಗಿಯೇ ನಡೆಯುತ್ತಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಿರುವ ಬೆನ್ನಲಿಯೇ ದೇವೆಗೌಡರು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಪಕ್ಷದ ಶಾಸಕರಾದ ಎಚ್.ವಿಶ್ವನಾಥ್, ನಾರಾಯಣಗೌಡ ಹಾಗೂ ಕೆ.ಗೋಪಾಲಯ್ಯ ಅವರು ಕಾಂಗ್ರೆಸ್‍ನ ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡು ಸ್ಪೀಕರ್ ಕಚೇರಿಗೆ ಹೋಗಿರುವುದು ದೇವೇಗೌಡರಿಗೆ ಶಾಕ್ ಆದಂತೆ ಆಗಿದೆ.
ರಾಜಕೀಯದಲ್ಲಿ ಹೆಚ್ಚು ಅರಿವನ್ನು ಹೊಂದಿರುವ ದೇವೆಗೌಡರು ಅತೃಪ್ತ ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ರಾಜೀನಾಮೆಯಿಂದ ಸರ್ಕಾರ ಪತನವಾಗಬಹುದು ಎಂದುಕೊಂಡು ಧೀಡಿರ್ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದ ಹಿನ್ನೆಲೆಯಲ್ಲಿ ದೇವೇಗೌಡರು ದಿಢೀರ್ ಜೆಡಿಎಸ್ ಕಚೇರಿಗೆ ಆಗಮಿಸಿ ಶಾಸಕರ ಸಭೆಯನ್ನು ನಡೆಸುತ್ತಿದ್ದಾರೆ. ಒಂದು ಕಡೆ ಡಿಕೆಶಿ ಅತೃಪ್ತ ಶಾಸಕರಿಗೆ ಆಮಿಷಗಳನ್ನು ಒಡ್ಡಿ ನಮ್ಮವರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ರಾಜಕೀಯದ ದಿಕ್ಕು ಮುಂದೆ ಯಾವ ರೀತಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments