ದೋಸ್ತಿ ಸರ್ಕಾರದ '12ಕ್ಕೂ ಹೆಚ್ಚು ಶಾಸಕರು' ರಾಜೀನಾಮೆ..? ಯಾರ್ಯಾರು ಗೊತ್ತಾ..?
ಈಗಾಗಲೇ ಮೈತ್ರಿ ಸರ್ಕಾರದ ಸಾಕಷ್ಟು ಅತೃಪ್ತ ಶಾಶಕರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಜೆಡಿಎಸ್ ಮತ್ತು ಕಾಂಗ್ರೆಸ್ ನ ಸುಮಾರು ಹನ್ನೆರಡು ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ಜೆಡಿಎಸ್-ಕಾಂಗ್ರೆಸ್ ಶಾಸಕರು ದೋಸ್ತಿಗೆ ಗುಡ್ ಬೈ ಹೇಳಿ, ಹೊರ ಬರಲಿದ್ದಾರೆ ಎಂಬ ಮಾತುಗಳು ಜೋರಾಗಿಯೇ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಕುಮಾರಸ್ವಾಮಿ ಇಂದು ಅಮೇರಿಕಾ ಖಾಸಗೀ ಪ್ರವಾಸ ಮುಗಿಸಿಕೊಂಡು ಕರ್ನಾಟಕಕ್ಕೆ ಸಂಜೆ ವಾಪಸ್ ಬರಲಿದ್ದಾರೆ. ಇದೇ ಸಮಯದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳು ಆಗಲಿವೆ.. ಬೆಂಗಳೂರಿನ ಐದು ಶಾಸಕರು, ರಾಜ್ಯದ ಇತರ ಜಿಲ್ಲೆಗಳ 8 ಶಾಸಕರು ಸೇರಿ ಒಟ್ಟು 12ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹುಣಸೂರು ಶಾಸಕ ಹೆಚ್ ವಿಶ್ವನಾಥ್
ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜು
ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್
ಜಯನಗರ ಶಾಸಕಿ ಸೌಮ್ಯರೆಡ್ಡಿ
ಬಳ್ಳಾರಿ ಶಾಸಕ ನಾಗೇಂದ್ರ
ಕೆಆರ್ ಪೇಟೆ ಶಾಸಕ ನಾರಾಯಣಗೌಡ
ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ
ವಿಜಯನಗರ ಶಾಸಕ ಆನಂದ್ ಸಿಂಗ್
ಹಿರೇಕೆರೂರು ಶಾಸಕ ಬಿಸಿ ಪಾಟೀಲ್
ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್
Comments