ಕೇಂದ್ರ ಬಜೆಟ್ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದೇನು ಗೊತ್ತಾ..?

ನೆನ್ನೆಯಷ್ಟೆ ಕೇಂದ್ರ ಸರ್ಕಾರ ಬಜೆಟ್ ಮಂಡನೆಯಾಗಿದೆ.. 2019-20ನೇ ಸಾಲಿನ ಕೇಂದ್ರ ಬಜೆಟ್ ಇಂದು ಸಂಸತ್ ನಲ್ಲಿ ಮಂಡನೆಯಾಗಿದೆ.ಆದರೆ ಮಂಡನೆಯಾದ ಬಜೆಟ್ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.. ಅಂದುಕೊಂಡಂತೆ ಬಜೆಟ್ ಮಂಡನೆಯಾಗಿಲ್ಲ… ನೆನ್ನೆಯಷ್ಟು ಕೆಟ್ಟ ಬಜೆಟ್ ಅನ್ನು ನಾನು ನೋಡೆ ಇಲ್ಲ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದರು..
ಕೇಂದ್ರದ ಬಜೆಟ್ ಬಗ್ಗೆ ಸಂಸದ ಉಮೇಶ್ ಜಾಧವ್..ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ನಿರುದ್ಯೋಗ ನಿವಾರಣೆ ಸಮಸ್ಯೆಯ ಬಗ್ಗೆ ಏನು ಹೇಳಿಲ್ಲ. ಕಾರ್ಪೊರೇಟ್ ತೆರಿಗೆ ಬಗ್ಗೆ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. . ಇದು ತುಂಬಾ ನಿರಾಸೆ ಮೂಡಿದ ಬಜೆಟ್ ಆಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೇಂದ್ರ ಬಜೆಟ್ ಬಗ್ಗೆ ಉಮೇಶ್ ಜಾಧವ್ ರಿಯಾಕ್ಟ್ ಮಾಡಿದ್ದು, ದೇಶದ ಇತಿಹಾಸಲ್ಲೇ ಒಳ್ಳೆಯ ಬಜೆಟ್ ಇದಾಗಿದೆ. ಬಸವಣ್ಣನವರ ತತ್ತ್ವಗಳ ಆಧಾರದ ಬಜೆಟ್ ಇದು. ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುವೆ ಎಂದು ಹೇಳಿದ್ದಾರೆ. ಒಬ್ಬೊಬ್ಬರು ಕೂಡ ಒಂದೊಂದು ರೀತಿಯಲ್ಲಿ ಕೇಂದ್ರ ಬಜೆಟ್ ಅನ್ನು ವ್ಯಾಖ್ಯಾನಿಸಿದ್ದಾರೆ.. ಕೆಲವರು ಒಳ್ಳೆಯ ಬಜೆಟ್ ಎಂದರೆ ಮತ್ತೆ ಕೆಲವರು ವ್ಯಂಗ ಮಾಡಿದ್ದಾರೆ.
Comments