ಬಿಜೆಪಿಯವರಿಂದ ಹಣದ ಆಮಿಷ..!! ಸಿದ್ದರಾಮಯ್ಯ ಆರೋಪ ಮಾಡಿದ್ದು ಯಾರ ಮೇಲೆ ಗೊತ್ತಾ..?

03 Jul 2019 10:47 AM | Politics
447 Report

ರಾಜ್ಯ ರಾಜಕಾರಣದಲ್ಲಿ ಇತ್ತಿಚಿಗೆ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಲೋಕಸಮರದ ಹೊತ್ತಿನಲ್ಲಿ ಸಾಕಷ್ಟು ಅತೃಪ್ತ ಶಾಸಕರು ಪಕ್ಷಾಂತರಗೊಳ್ಳುತ್ತಿದ್ದರು.. ಲೋಕ ಸಮರದ ಫಲಿತಾಂಶ ಬಂದ ಮೇಲಂತೂ ಸಾಕಷ್ಟು ಅತೃಪ್ತ ಶಾಸಕರು ದೋಸ್ತಿ ಸರ್ಕಾರಕ್ಕೆ ಕೈಕೊಟ್ಟು ಬಿಜೆಪಿ ಪಕ್ಷವನ್ನು ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿಯು ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದ್ದು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಭಾರಿ ಮೊತ್ತದ ಹಣ ಅಧಿಕಾರದ ಅಮೀಷವನ್ನು ಬಿಜೆಪಿ ಮುಖಂಡರು ನಮ್ಮವರಿಗೆ ತೋರಿಸುತ್ತಿದ್ದರು.. ಕಳೆದ ವರ್ಷದಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿ ವಿಫಲಗೊಂಡಿದ್ದಾರೆ ಎಂದು ತಿಳಿಸಿದರು.. ಮೈತ್ರಿ ಸರ್ಕಾರವನ್ನು ಉರುಳಿಸಲು ನಾವು ಪ್ರಯತ್ನಿಸುತ್ತಿಲ್ಲ… ಅವರಾಗಿಯೇ ಬಂದರೆ ನಾವು ಸೇರಿಸಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಬಿಜೆಪಿಯ ವಿರುದ್ದ ಕಿಡಿಕಾರಿದರು.

Edited By

Manjula M

Reported By

Manjula M

Comments