ನಿಖಿಲ್ ಕುಮಾರಸ್ವಾಮಿ ಹೆಗಲಿಗೆ ಬಿತ್ತು ಮತ್ತೊಂದು ಜವಬ್ದಾರಿ..!! ಏನ್ ಗೊತ್ತಾ..?
ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶವು ಯಾರು ಕೂಡ ಊಹಿಸಲಾಗದ ರೀತಿಯಲ್ಲಿ ಬಂದಿದ್ದು ಎಲ್ಲರಿಗೂ ಕೂಡ ತಿಳಿದೆ ಇದೆ. ಜೆಡಿಎಸ್, ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿತ್ತು.. ಅದರಲ್ಲಿಯೂ ನಿಖಿಲ್ ಹಾಗೂ ದೇವೆಗೌಡರ ಸೋಲು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಯಿತು.. ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ .ದೇವೇಗೌಡರು ಪಾದಯಾತ್ರೆ ಕೈಗೊಂಡಿದ್ದು, ಇದರ ಸಾರಥ್ಯವನ್ನು ನಿಖಿಲ್ ಕುಮಾರಸ್ವಾಮಿ ಹೆಗಲಿಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೆಡಿಎಸ್ ಪಾದಯಾತ್ರೆಯು ಆಗಸ್ಟ್ 20 ರಿಂದ ಮೈಸೂರಿನ ನಂಜನಗೂಡಿನಿಂದ ಪ್ರಾರಂಭವಾಗಲಿದ್ದು, ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕೊನೆಯಾಗಲಿದೆ. ಈ ಪಾದಯಾತ್ರೆಗೆ ದೇವೇಗೌಡರು ತಮ್ಮ ಕಿರಿಯ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಹೆಗಲಿಗೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶನಿವಾರ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಹೆಚ್.ಡಿ. ದೇವೇಗೌಡರು, ವಿಚಾರ, ವಿಕಾಸ, ವಿಶ್ವಾಸ ಧ್ಯೇಯ ವಾಕ್ಯದೊಂದಿಗೆ ಜೆಡಿಎಸ್ ಆಗಸ್ಟ್ 20 ರಿಂದ ಪಾದಯಾತ್ರೆ ಆರಂಭಿಸಲಿದೆ ಎಂದು ತಿಳಿಸಿದರು.. ಮಂಡ್ಯದಲ್ಲಿ ನಿಖಿಲ್ ಸೋತರು ಕೂಡ ಸಾಕಷ್ಟು ಸಮಾಜಸೇವೆಯನ್ನು ಮಾಡುತ್ತಿದ್ದಾರೆ., ಇದೇ ನಿಟ್ಟಿನಲ್ಲಿ ಸೋತ ಜಾಗದಲ್ಲಿ ಗೆದ್ದೆ ಗೆಲ್ಲುತ್ತಾನೆ ಎಂದು ಪ್ರತಿಜ್ಞೆಯನ್ನು ಮಾಡಿದ್ದಾರೆ.
Comments