ಸಿದ್ದರಾಮಯ್ಯ `ಜೆಡಿಎಸ್' ಬಿಟ್ಟ ರಹಸ್ಯ ತಿಳಿಸಿದ 'ಕೈ' ಶಾಸಕ..!!

ರಾಜಕೀಯ ವಲಯದಲ್ಲಿ ಸಾಕಷ್ಟು ವಿಷಯಗಳು ಚರ್ಚೆಯಾಗುತ್ತಲೆ ಇರುತ್ತವೆ. ಅದರಲ್ಲೂ ಪಕ್ಷ ಬಿಟ್ಟು ಪಕ್ಷಕ್ಕೆ ಹಾರುವವರ ಸಂಖ್ಯೆ ಮಾತ್ರ ಜೋರಾಗಿಯೇ ಇದೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ಕೂಡ ಸೇರಿಕೊಂಡಿದ್ದಾರೆ.. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷ ಬಿಟ್ಟು ಬಂದಿರುವ ಕಾರಣವನ್ನು ಕಾಂಗ್ರೆಸ್ ಶಾಸಕ ಅಮರೇಗವಡ ಬಯ್ಯಾಪೂರ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಬಯ್ಯಾಪೂರ್ ಅವರು ಸಿದ್ದರಾಮಯ್ಯ ಜೆಡಿಎಸ್ ಬಿಡಲು ಅಹಿಂದ ಕಾರಣವಾಗಿದೆ. ಜೆಡಿಎಸ್ ನಲ್ಲಿ ಸಿದ್ದರಾಮಯ್ಯ ಪಕ್ಷಾತೀತವಾಗಿ ಅಹಿಂದ ಕಟ್ಟಲು ಮುಂದಾಗಿದ್ದರು. ಆ ಸಮಯದಲ್ಲಿ ಹೆಚ್.ಡಿ. ದೇವೇಗೌಡರು ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಬಂದಿದ್ದರು ಎಂದು ಅಮರೇಗೌಡ ಬಯ್ಯಾಪೂರ್ ತಿಳಿಸಿದ್ದಾರೆ..ನಾನು ಸಿದ್ದರಾಮಯ್ಯ ಅವರ ಗರಡಿಯಲ್ಲೇ ಪಳಗಿದ್ದೇನೆ. ಜೆಡಿಎಸ್ ನಲ್ಲಿ ಸಿದ್ದರಾಮಯ್ಯನವರಿಗೆ ಸಮಸ್ಯೆಗಳು ಉಂಟಾಗಿದ್ದವು. ಅಹಿಂದ ಸಮಾಜಕ್ಕೆ ನ್ಯಾಯ ಕೊಡಲು ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಕೊಂಡರು..ಇತ್ತಿಚಿಗೆ ಅದರಲ್ಲೂ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೆ ದೋಸ್ತಿ ಸರ್ಕಾರದ ಹಲವು ನಾಯಕರು ಪಕ್ಷ ಬಿಟ್ಟಿದ್ದಾರೆ
Comments