ಮಂಡ್ಯ ಜನರ ಸಮಸ್ಯೆ ನಿವಾರಿಸುವಲ್ಲಿ ಸುಮಲತಾ ಅಂಬರೀಶ್'ಗೆ ಸಿಕ್ಕಿತ್ತು ಮೊದಲ ಜಯ..!!!
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಮುಂದೆ ಈ ಬಾರಿ ಸುಮಲತಾ ಜಯಶಾಲಿಯಾಗಿ ಹೊರ ಬಂದರು.. ಇ ನಿಟ್ಟಿನಲ್ಲಿ ಸುಮಲತಾ ಹೆಗಲ ಮೇಲೆ ಸಾಕಷ್ಟು ಜವಬ್ಧಾರಿಗಳು ಬಿದ್ದವು. ಮಂಡ್ಯದ ನೂತನ ಸಂಸದೆಯಾಗಿ ಸುಮಲತಾ ಆಯ್ಕೆಯಾಗಿದ್ದಾರೆ.. ಮೊದಲೆ ಹೇಳಿದ್ದಂತೆ ಸುಮಲತಾ ಮಂಡ್ಯ ಜನರ ಸಮಸ್ಯೆಗೆ ಧನಿಯಾಗಿದ್ದಾರೆ. ಸಂಸತ್ತಿನ ಮೊದಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ವೇಳೆ ಕೇಂದ್ರ ಸಚಿವ ಸದಾನಂದ ಗೌಡರನ್ನು ಭೇಟಿಯಾಗಿದ್ದ ಸುಮಲತಾ ಮಂಡ್ಯ ಜಿಲ್ಲೆಯ ರೈತರಿಗೆ ಕಾವೇರಿ ನೀರು ಹರಿಸುವಂತೆ ಮನವಿ ಪತ್ರ ನೀಡಿದ್ದರು. ಈ ಭೇಟಿಗೆ ಇದೀಗ ಮೊದಲ ಯಶಸ್ಸು ದೊರೆತಿದೆ.
ನೂತನ ಸಂಸದೆಯ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವ ಸದಾನಂದ ಗೌಡರು, ಕಾವೇರಿ ನಿರ್ವಹಣಾ ಮಂಡಳಿಗೆ ಈ ವಿಷಯದ ಬಗ್ಗೆ ಪತ್ರ ಬರೆಯಲಾಗಿದ್ದು, ಮಂಡ್ಯ ರೈತರಿಗೆ 2 ಟಿಎಂಸಿ ನೀರು ಬಿಡಲು ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಈ ಮನವಿಯನ್ನು ಸ್ವೀಕರಿಸಿರುವ ಪ್ರಾಧಿಕಾರ ಇಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.. ತಮ್ಮ ಪ್ರಯತ್ನಕ್ಕೆ ಮೊದಲ ಯಶಸ್ಸು ಸಿಕ್ಕಿರುವುದು ಸುಮಲತಾಗೂ ಕೂಡ ಸಂತೋಷ ನೀಡಿದೆ, ಟ್ವಿಟರ್ ಮೂಲಕ ಸಚಿವರಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಸುಮಲತಾ ಮಂಡ್ಯ ಜನರ ಸಮಸ್ಯೆಗೆ ಧನಿಯಾಗಿದ್ದಾರೆ.. ಇದರಿಂದ ಮಂಡ್ಯದ ಜನತೆ ಖುಷಿಯಾಗಿದ್ದಾರೆ.. ಮುಂದೆ ಯಾವ ರೀತಿಯ ತಿರ್ಮಾನಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ..
Comments