ನಾವೆಲ್ಲಾ ಯಾರು..!! ನಾವೆಲ್ಲ ಸಣ್ಣವರು..!! ಎಂದು ನಿಖಿಲ್ ಟಾಂಗ್ ಕೊಟ್ಟಿದ್ದು ಯಾರಿಗೆ ಗೊತ್ತಾ..?
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ್ದು ಮಂಡ್ಯ ಅಖಾಡ ಮಾತ್ರ..ನಿಖಿಲ್ ಮತ್ತು ಸುಮಲತಾ ಇಬ್ಬರು ಕೂಡ ಅಖಾಡದಲ್ಲಿ ಸಖತ್ ಪೈಪೋಟಿ ಏರ್ಪಟ್ಟಿತ್ತು.. ಆದರೆ ಅಖಾಡದಲ್ಲಿ ಗೆದ್ದಿದ್ದು ಮಾತ್ರ ಪಕ್ಷೇತರ ಅಭ್ಯರ್ಥಿ ಸುಮಲತಾ... ಇದೀಗ ಮಂಡ್ಯದ ಸಂಸದೆ ಸುಮಲತಾ ಆಯ್ಕೆ ಆಗಿದ್ದಾರೆ. ನೂತನ ಸಂಸದೆ ಸುಮಲತಾ ಹೆಗಲ ಮೇಲೆ ಸಾಕಷ್ಟು ಜವಬ್ಧಾರಿಗಳು ಬಂದಿವೆ. ಅದನ್ನೆ ಇದೀಗ ನಿಖಿಲ್ ವ್ಯಂಗ್ಯವಾಗಿ ಸುಮಲತಾ ಅವರನ್ನು ಟೀಕಿಸಿದ್ದಾರೆ.
ಕಾವೇರಿ ನದಿ ನೀರು ವಿವಾದ ಬಗೆಹರಿಸುವ ಜವಬ್ದಾರಿಯನ್ನು ನಿಖಿಲ್ ಕುಮಾರಸ್ವಾಮಿ ನೂತನ ಸಂಸದೆ ಸುಮಲತಾ ಅವರ ಹೆಗಲಿಗೆ ಹೊರಸಿ ಬಿಟ್ಟಿದ್ದಾರೆ. ನಿಖಿಲ್ ಜೆಡಿಎಸ್ ಕಾರ್ಯಕರ್ತರ ಮನೆಗೆ ಆಗಮಿಸಿದ್ದ ಸಮಯದಲ್ಲಿ ಈ ರೀತಿ ಮಾತನಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕಾವೇರಿ ವಿವಾದವನ್ನು ಸುಮಲತಾ ಅವರು ಬಗೆ ಹರಿಸುತ್ತಾರೆ.. ಅವರಿಗೆ ಒಳ್ಳೆಯ ಕಾಂಟ್ಯಾಕ್ಟ್ಸ್ ಇದೆ.. ಬಿಜೆಪಿ ಬೆಂಬಲಿತ ಅಭ್ಯರ್ಥಿ.. ಮೋದಿಯು ಕೂಡ ಅವರಿಗೆ ಚಿರ ಪರಿಚಿತರಾಗಿದ್ದಾರೆ.. ಅವರೆಲ್ಲರ ಜೊತೆ ಮಾತಾಡಿ ಕಾವೇರಿ ವಿವಾದವನ್ನು ಬಗೆಹರಿಸುತ್ತಾರೆ ಎಂದು ಟೀಕಿಸಿ ವ್ಯಂಗ್ಯವಾಗಿ ಮಾತನಾಡಿದರು.ಅಷ್ಟೆ ಅಲ್ಲದೆ ನಾವೆಲ್ಲ ಸಣ್ಣವರು, ಜನರು ಆರಿಸಿರುವವರು ಕಾವೇರಿ ವಿವಾದವನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಟಾಂಗ್ ನೀಡಿದರು.
Comments