ಸೋತ ಜಾಗದಲ್ಲೆ ಗೆಲ್ಲಲ್ಲು ನಿಖಿಲ್ ಕುಮಾರಸ್ವಾಮಿ ಮಾಸ್ಟರ್ ಫ್ಲಾನ್..!!
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಪರವಾಗಿ ಮಂಡ್ಯ ಅಭ್ಯರ್ಥಿಯಾಗಿ ನಿಖಿಲ್ ಅಖಾಡಕ್ಕೆ ಇಳಿದಿದ್ದು ಎಲ್ಲರಿಗೂ ಕೂಡ ತಿಳಿದೆ ಇದೆ.. ಆದರೆ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಮುಂದೆ ನಿಖಿಲ್ ಸೋಲನ್ನು ಅನುಭವಿಸಿದರು..ಆದರೂ ಕೂಡ ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ, ಗೆದ್ದರೂ,ಸೋತರು ಮಂಡ್ಯ ಜನರ ಸೇವೆ ಮಾಡುತ್ತೇನೆ ಎಂದಿದ್ದಾರೆ.. ಇದೀಗ ಕಳೆದುಕೊಂಡ ಜಾಗದಲ್ಲೆ ಗೆದ್ದು ತೋರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.ಮಂಡ್ಯ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ನಿಖಿಲ್ ಕುಮಾರಸ್ವಾಮಿ ಪ್ರತಿಜ್ಞೆ ಮಾಡಿದ್ದು, ಕಳೆದುಕೊಂಡಲ್ಲೇ ಪಡೆಯುವುದಕ್ಕೆ ಸಿಎಂ ಪುತ್ರ ಮೆಗಾ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ..
ನಿಖಿಲ್ ಕುಮಾರಸ್ವಾಮಿ ಸೋತ ಮಂಡ್ಯ ನೆಲದಲ್ಲೇ ಗೆಲುವು ಕಾಣಲು ಪ್ರತಿಜ್ಞೆ ಮಾಡಿದ್ದು, ಈ ಬಗ್ಗೆ ತಾತ ದೇವೇಗೌಡರ ಬಳಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ನಿಖಿಲ್ ತಮ್ಮ ನೇತೃತ್ವದಲ್ಲಿ ಜೆಡಿಎಸ್ ಪಾದಯಾತ್ರೆಗೆ ಚಿಂತನೆ ಮಾಡಿದ್ದು, ಆಂಧ್ರ ಪ್ರದೇಶದಲ್ಲಿ ನಡೆದ ಜಗನ್ ಮಾದರಿ ಪಾದಯಾತ್ರೆಗೆ ನಿಖಿಲ್ ಪ್ಲಾನ್ ಸಖತ್ ಮಾಸ್ಟರ್ ಫ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲು ಕಂಡಿದ್ದು, ಹೀಗಾಗಿ ಸೋಲು ಕಂಡ ಸ್ಥಳದಲ್ಲಿಯೇ ಎದ್ದು ಬರಲು ನಿಖಿಲ್‍ಗೆ ಯುವರಾಜನ ಪಟ್ಟ ಕಟ್ಟಿ ಪಕ್ಷ ಸಂಘಟನೆಯತ್ತ ಗೌಡರು ಮುಖ ಮಾಡಲು ತಂತ್ರ ರೂಪಿಸಿದ್ದಾರೆ. ನಿಖಿಲ್ ದೇವೆಗೌಡರು ಸಾಥ್ ನೀಡಲಿದ್ದಾರೆ..ಒಂದು ಕಡೆ ಅಪ್ಪ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಮತ್ತೊಂದು ಕಡೆ ನಿಖಿಲ್ ಸಿದ್ದರಾಗುತ್ತಿದ್ದಾರೆ ಎನ್ನಲಾಗಿದೆ.
Comments