ದೋಸ್ತಿ ಸರ್ಕಾರದ ಬಗ್ಗೆ ಹೆಚ್ ಡಿ ದೇವೆಗೌಡರು ಹೇಳಿದ್ದೇನು..?

22 Jun 2019 9:11 AM | Politics
461 Report

ಲೋಕಸಭಾ ಚುನಾವಣೆಯು ಮುಗಿದ ಮೇಲೆ ಈಗಿರುವ ದೋಸ್ತಿ ಸರ್ಕಾರ ಪತನವಾಗುತ್ತದೆ ಎಂಬ ಮಾತು ಎಲ್ಲ ಕಡೆಯಲ್ಲಿಯೂ ಕೂಡ ಕೇಳಿ ಬರುತ್ತಿತ್ತು.. ಬಿಜೆಪಿ ಪಕ್ಷದವರು ಈ ಬಗ್ಗೆ ಹೆಚ್ಚು ಚರ್ಚೆಯನ್ನು ಮಾಡುತ್ತಿದ್ದರು.. ಆದರೆ ದೋಸ್ತಿ ನಾಯಕರು ಮಾತ್ರ ಇದ್ಯಾವುದರ ಬಗ್ಗೆಯೂ ಕೂಡ ತಲೆ ಕೆಡಿಸಿಕೊಂಡಿರಲಿಲ್ಲ.. ಸಚಿವ ರೇವಣ್ಣ ಕೂಡ ಸರ್ಕಾರ ಬೀಳುತ್ತದೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು..

ಜೆಡಿಎಸ್ ಪಕ್ಷದ ಕತೆ ಮುಗಿಯಿತು ಎಂದು ಹೇಳುವವರಿಗೆ ಉತ್ತರ ನೀಡುತ್ತೇನೆ. ಇನ್ನೂ ನಾಲ್ಕು ವರ್ಷ ಪಕ್ಷವನ್ನು ಗಟ್ಟಿಗೊಳಿಸಲು ದುಡಿಯುತ್ತೇನೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇದೀಗ ತಿಳಿಸಿದ್ದಾರೆ.ಮೈಸೂರಿನಲ್ಲಿ ಆಯೋಜನೆ ಮಾಡಲಾಗಿದ್ದ ವಿಧಾನಸಭೆ ಹಾಗೂ ಪೌರಸಂಸ್ಥೆ ಚುನಾವಣೆಗಳ ಪರಾಜಿತ ಅಭ್ಯರ್ಥಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ದೇವೆಗೌಡ ಅವರು ರಾಜಕಾರಣದಲ್ಲಿ ಸೋಲು ಶಾಶ್ವತವಲ್ಲ, ಪ್ರಾದೇಶಿಕ ಶಕ್ತಿಯಾಗಿ ಕಟ್ಟಿ ಬೆಳೆಸಿರುವ ಪಕ್ಷವನ್ನು ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು. ನಮ್ಮ ಪಕ್ಷದಲ್ಲಿ ಯಾವ ರೀತಿಯ ಗೊಂದಲವೂ ಕೂಡ ಇಲ್ಲ. ಎಲ್ಲರೂ ಒಗ್ಗೂಡಿ ಜೆಡಿಎಸ್ ನೊಂದಿಗೆ ಮುಂದುವರಿಯುವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ. ಸದ್ಯ ಹೀಗಿರುವ ದೋಸ್ತಿ ಸರ್ಕಾರ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.

Edited By

Manjula M

Reported By

Manjula M

Comments