ನೂತನ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಸಚಿವರಿಗೆ ಮಾಡಿದ ಮನವಿ ಏನ್ ಗೊತ್ತಾ..?

ಮಂಡ್ಯ ಜಿಲ್ಲೆಯ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಬಗ್ಗೆ ಇತ್ತಿಚಿಗೆ ಸಾಕಷ್ಟು ನೆಗೆಟಿವ್ ಕಮೆಂಟ್ ಗಳು ಬಂದವು… ಸ್ವಾಭಿಮಾನಿಗಳು ಅಂತಾ ಹೇಳುದ್ರು ಮಂಡ್ಯದ ರೈತ ಸತ್ತಾಗ ಎಲ್ಲಿ ಹೋಗಿದ್ರಿ ಎಂಬ ಪ್ರಶ್ನೆಗಳು ಬಂದವು ಎನ್ನುವ ಮಾತುಗಳೂ ಕೂಡ ಕೇಳಿ ಬರುತ್ತಿದ್ದವು.. ಆದರೆ ಇದೀಗ ಮಂಡ್ಯದ ಪರ ನಿಲ್ಲುತ್ತೇನೆ ಎಂದ ಸುಮಲತಾ ಅಂಬರೀಶ್ ಅದೇ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ಮಂಡ್ಯದ ರೈತರ ಪರ ಕಾವೇರಿ ನೀರಿನ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಜನರ ಜೀವನಾಡಿ ಕಾವೇರಿ, ಕಾವೇರಿಯ ಕೆಆರ್ ಎಸ್ ಅಣೆಕಟ್ಟೆಯಿಂದ ಮಂಡ್ಯ ರೈತರಿಗೆ ನೀರು ಹರಿಸಿ, ಸಕಾಲಕ್ಕೆ ಮಳೆ ಬಾರದೆ ಸಂಕಷ್ಟದಲ್ಲಿ ಇದ್ದಾರೆ. ಇಂತಹ ರೈತರ ಬೆಳೆಗಳಿಗೆ ನೀರು ಹರಿಸುವಂತೆ ಕೇಂದ್ರ ಸಚಿವರಾದ ಡಿವಿ ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಷಿಯವರಿಗೆ ಮಂಡ್ಯ ಸಂಸದೆ ಸುಮಲತಾ ಮನವಿ ಸಲ್ಲಿಸಿದ್ದಾರೆ. ಇಂದು ನವದೆಹಲಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿವಿ ಸದಾನಂದಗೌಡ ಅವರನ್ನು ಭೇಟಿ ಮಾಡಿದ ಮಂಡ್ಯ ಸಂಸದೆ ಸುಮಲತಾ ಮನವಿಯನ್ನು ಸಲ್ಲಿಸಿದರು. ಇದೇ ಸಮಯದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿಯವರನ್ನೂ ಕೂಡ ಭೇಟಿಮಾಡಿದ ಮಂಡ್ಯ ಸಂಸದೆ ಸುಮಲತಾ, ಮಂಡ್ಯ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಚರ್ಚೆ ನಡೆಸಿದರು. ಮಂಡ್ಯದ ಧ್ವನಿಯಾಗಿದ್ದ ಸುಮಲತಾ ಇದೀಗ ಕೇಂದ್ರದಲ್ಲಿ ರೈತರ ಪರ ಮನವಿ ಮಾಡಿಕೊಂಡಿದ್ದಾರೆ.
Comments