ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದ ಜೆಡಿಎಸ್‌ ಶಾಸಕ…!!!

20 Jun 2019 10:45 AM | Politics
652 Report

ಈಗಾಗಲೇ ದೋಸ್ತಿ ಸರ್ಕಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಬುಗಿಲೆದ್ದಿವೆ.. ತಮ್ಮ ತಮ್ಮ ಸ್ವ ಪಕ್ಷಗಳ ಮೇಲಿಯೇ ಅಸಮಾಧಾನಗಳು ಕಾಣಿಸುತ್ತಿವೆ.. ಜೆಡಿಎಸ್ ನ ರಾಜ್ಯಾಧ್ಯಕ್ಷರಾದ ಹೆಚ್ ವಿಶ್ವನಾಥ್  ಅವರು ಇದೀಗ ಮತ್ತೊಂದು ಹೊಸಬಾಂಬ್ ವೊಂದನ್ನು ಸಿಡಿಸಿದ್ದಾರೆ. ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಆ ರಾಜೀನಾಮೆಯನ್ನು ಅಂಗೀಕಾರ ಮಾಡಿಲ್ಲ.. ಹಾಗಾಗಿ ಇದೀಗ ಹೊಸಬಾಂಬ್ ಸಿಡಿಸಿದ್ದಾರೆ. ಹೌದು.. ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್ ವಿಶ್ವನಾಥ್ ಅವರು ತಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆ ನೀಡಿರುವುದನ್ನು ಈ ಕೂಡಲೇ ಅಂಗೀಕಾರ ಮಾಡಬೇಕು ಇಲ್ಲವಾದರೆ ನಾನು ನನ್ನ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಯೋಚನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ವಿಶ್ವನಾಥ್ ಇದೇ ಸಮಯದಲ್ಲಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿಯವರು ಅಧ್ಯಕ್ಷರಾಗಲಿ ಎಂದು ತಿಳಿಸಿದರು.. ಇನ್ನು ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಇಲ್ಲಿ ತನಕ ಯಾವುದೇ ಸಚಿವರು ನೇಮಕ ಆಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಕೂಡಲೇ ಶಿಕ್ಷಣ ಸಚಿವರನ್ನು ನೇಮಕ ಮಾಡುವಂತೆ ಸಿಎಂ ಅವರನ್ನು ಆಗ್ರಹಿಸಿದರು.  ಇನ್ನು ರೋಷನ್‌ ಬೇಗ್‌ ಅವರನ್ನು ಎಐಸಿಸಿ ಅಮಾನತು ಮಾಡಿರುವ ಬಗ್ಗೆ ಮಾತನಾಡಿದ ಅವರು ರೋಷನ್‌ ಬೇಗ್‌ ಅವರನ್ನು ಅಮಾನತ್ತು ಮಾಡಿರುವುದು ಸರಿಯಲ್ಲ. ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು. ಇನ್ನು ಸಚಿವ ಸಂಪುಟ ವಿಸ್ತರಣೆ ಮಾಡಿ ಇಬ್ಬರಿಗೆ ಅವಕಾಶ ನೀಡಿದರು ಕೂಡ ಇಲ್ಲಿ ತನಕ ಅವರಿಗೆ ಸಚಿವ ಸ್ಥಾನವನ್ನು ಹಂಚಿಕೆ ಮಾಡಿಲ್ಲ. ಇದು ಹಿಂದ ವರ್ಗಕ್ಕೆ ಕೆಟ್ಟ ಸಂದೇಶವನ್ನು ರವಾನೆ ಮಾಡಿದ ಹಾಗೇ ಆಗುತ್ತಿದೆ ಎಂದು ತಿಳಿಸಿದರು.. ಒಟ್ಟಾರೆಯಾಗಿ ದೋಸ್ತಿ ಸರ್ಕಾರದಿಂದ ಒಬ್ಬೊಬ್ಬರೇ ಹಿಂದೆ ಸರಿಯುತ್ತಿರುವುದು ಮುಂದೆ ತೊಂದರೆಯಾಗಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ.   

Edited By

Manjula M

Reported By

Manjula M

Comments