ಸರ್ಕಾರ ಉರುಳುವ ಸುಳಿವು ಕೊಟ್ರ ಸಚಿವ ಹೆಚ್.ಡಿ ರೇವಣ್ಣ..!! ಕಾರಣ ಏನ್ ಗೊತ್ತಾ..?

ಯಾಕೋ ರಾಜ್ಯ ರಾಜಕೀಯದಲ್ಲಿ ಯಾವುದು ಸರಿಯಿಲ್ಲ ಎನಿಸುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.. ಲೋಕಸಭಾ ಚುನಾವಣೆ ಮುಗಿದ ಮೇಲೆ ದೋಸ್ತಿ ಸರ್ಕಾರ ಉರುಳುತ್ತದೆ ಎನ್ನಲಾಗುತ್ತಿತ್ತು.. ದೋಸ್ತಿಗಳು ಮಾತ್ರ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಇದೀಗ ಸಚಿವ ರೇವಣ್ಣ ಸರ್ಕಾರ ಉರುಳುವ ಬಗ್ಗೆ ಸೂಚನೆಯನ್ನು ನೀಡಿದ್ದಾರೆ.
ಸಚಿವ ರೇವಣ್ಣ ಇಂದು ಹಾಸನದ ತಣ್ಣೀರುಹಳ್ಳದಲ್ಲಿರುವ ಚೆಸ್ಕಾಂ ಮುಖ್ಯ ಕಾರ್ಯಪಾಲನಾ ಕಚೇರಿಗೆ ಶಂಕುಸ್ಥಾಪನೆ ಮಾಡಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು. ಇದೇ ಸಮಯದಲ್ಲಿ ರೇವಣ್ಣ ಮಾತನಾಡಿ, ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತದೆ, ಈಗ ಬೀಳುತ್ತೆ ಎಂದು ಎಲ್ಲರು ಹೇಳಿದರು. ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ ಎಂದು ತಿಳಿಸಿದರು.. ಇನ್ನು ತುಮಕೂರಿಗೆ 25 ಟಿಎಂಸಿ ನೀರು ನೀಡಿದ ಮೊದಲ ಸಿಎಂ ಕುಮಾರಸ್ವಾಮಿ. ಈಗ ಹೊಸ ಎಂಪಿ ಬಂದಿದ್ದಾರೆ ಹೇಗೆ ನೀರು ಕೊಡಿಸುತ್ತಾರೆ ನೋಡೋಣ ಅಂತ ಸವಾಲು ಹಾಕಿದರು. 2006 ರಲ್ಲಿ ನಮ್ಮ ಸರ್ಕಾರದಲ್ಲಿ 450 ಚೆಸ್ಕಾಂ ಸಬ್‌ಸ್ಟೇಷನ್ ಮಾಡಿದ್ದೆ. ಈಗ ಎಲ್ಲಾ ಆನ್‌ಲೈನ್, ಗೀನ್‌ಲೈನ್ ಅಂತಾರೆ ಆಗ ಯಾವುದೂ ಇರಲಿಲ್ಲ ಎಂದು ಕಿಡಿಕಾರಿದರು. ನೋಡೋಣ ನಾನು ಇರುವಷ್ಟು ದಿನ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದರು.. ಒಟ್ಟಿನಲ್ಲಿ ಸರ್ಕಾರ ಯಾವಾಗ ಬೇಕಾದರೂ ಕೂಡ ಬೀಳಬಹುದು ಎಂಬ ಮಾತುಗಳು ದೋಸ್ತಿ ವಲಯದಲ್ಲಿಯೇ ಕೇಳಿ ಬರುತ್ತಿದೆ.
Comments