ಸತ್ಯ ಹೇಳಿದ್ರೆ ಅಮಾನತು: ಕಿಡಿ ಕಾರಿದ ರೋಷನ್ ಬೇಗ್
ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಗೋಚರವಾಗುತ್ತಿವೆ.. ಇದೀಗ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.. ಕಾಂಗ್ರೆಸ್ ಪಕ್ಷದಿಂದ ತಮ್ಮನ್ನು ಅಮಾನತು ಮಾಡಿರುವ ಹಿನ್ನಲೆಯಲ್ಲಿ ಸತ್ಯ ಹೇಳೋದೇ ಅಪರಾಧನಾ? ಎಂದು ಕಾಂಗ್ರೆಸ್ ನ ಮಾಜಿ ಸಚಿವ ರೋಷನ್ ಬೇಗ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ಹಿನ್ನಲೆ ಶಿವಾಜಿ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ರೋಷನ್ ಬೇಗ್ ನಾನು ಏನು ಹೇಳಿದ್ದೇನೆ, ಅದು ಸತ್ಯ. ಸತ್ಯ ಹೇಳೋದು ಅಪರಾಧನಾ? ನಾನು ರಾಹುಲ್ ಗಾಂಧಿ ಬಗ್ಗೆ ಹೇಳಿಕೆ ನೀಡಿಲ್ಲ. ಈಗಲೂ ನಾನು ಒಬ್ಬ ಪಕ್ಷದ ಶಿಸ್ತಿನ ಕಾರ್ಯಕರ್ತ ಎಂದು ತಿಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬಹಿರಂಗವಾಗಿ ಸಾಕಷ್ಟು ಜನರು ಪ್ರಚಾರ ಮಾಡಿದ್ದರು. ಅವರ ಮೇಲೆ ಮಾತ್ರ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ . ಹಾಗಾದ್ರೆ ನಾನು ಸತ್ಯ ಹೇಳಿದ್ದೆ ತಪ್ಪಾಯ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಕಾಂಗ್ರೆಸ್ ನ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಹೆಚ್.ಕೆ.ಪಾಟೀಲ್, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿ ಆಮೇಲೆ ದೆಹಲಿಗೆ ಹೋಗಬೇಕಾ ಬೇಡವಾ ಎಂದು ನಿರ್ಧಾರ ಮಾಡುತ್ತೇನೆ ಎಂದು ರೋಷನ್ ಬೇಗ್ ತಿಳಿಸಿದ್ದಾರೆ. ಒಟ್ಟಾರೆಯಾಗಿ ತಮ್ಮ ತಮ್ಮ ಸ್ವಪಕ್ಷಗಳಲ್ಲಿಯೇ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿ ಬರುತ್ತಿವೆ..
Comments