ಬಿಜೆಪಿಯಿಂದ ಜೆಡಿಎಸ್ ಶಾಸಕನಿಗೆ `10 ಕೋಟಿ ರೂ.ಆಫರ್..!!!! ಹೀಗೆ ಹೇಳಿದ್ದು ಯಾರ್ ಗೊತ್ತಾ..?
ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ.. ಕಾಂಗ್ರೆಸ್ ಮತ್ತು ಜೆಡಿಎಸ್ ಹೀನಾಯ ಸೋಲನ್ನು ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿತ್ತು… ಈಗಿರುವ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿಯು ಶತ ಪ್ರಯತ್ನ ಮಾಡುತ್ತಿದೆ.. ಆಪರೇಷನ್ ಕಮಲ ಮಾಡಲು ಬಿಜೆಪಿಯು ಆಗಿಂದಾಗೆ ಮಾಸ್ಟರ್ ಫ್ಲಾನ್ ಮಾಡುತ್ತಿರುತ್ತಾರೆ. ಇದೇ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ.
ಹೌದು ಸೋಮವಾರ ಜೆಡಿಎಸ್ ಶಾಸಕರೊಬ್ಬರಿಗೆ ಕರೆ ಮಾಡಿ 10 ಕೋಟಿ ರೂ. ಆಫರ್ ನೀಡಲಾಗಿದೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸೋಮವಾರ ರಾತ್ರಿ ಜನತಾ ದರ್ಶನ ಮುಗಿಸಿ ನಮ್ಮ ತೋಟದ ಮನೆಯಲ್ಲಿ ಮಲಗಿದ್ದ ವೇಳೆ ನಮ್ಮ ಶಾಸಕರೊಬ್ಬರು ಕರೆ ಮಾಡಿ, 10 ಕೋಟಿ ರೂ. ಡೀಲ್ ಬಗ್ಗೆ ನನಗೆ ತಿಳಿಸಿದರು ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ. ಬಿಜೆಪಿಯ ನಾಯಕರೊಬ್ಬರು ಕಾಲ್ ಮಾಡಿ ನಾಳೆ ಸರ್ಕಾರ ಬೀಳುತ್ತದೆ. ಈಗಾಗಲೇ 10 ಶಾಸಕರು ಸಹಿ ಮಾಡಿದ್ದಾರೆ. ನೀವೂ ಬಂದು ಬಿಡಿ, 10 ಕೋಟಿ ರೂ. ಕೊಡುತ್ತೇವೆ ಎಂದು ನಮ್ಮ ಶಾಸಕರಿಗೆ ಆಫರ್ ನೀಡಿದ್ದಾರೆ ಎಂದು ತಿಳಿಸಿದರು. ಅದೇ ರೀತಿಯಾಗಿ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಬೀಳುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಆಮಿಷಗಳಿಗೆ ಬಲಿಯಾಗಿ ಪಕ್ಷ ಬಿಡುವ ಕೆಲಸವನ್ನು ಅತೃಪ್ತ ಶಾಸಕರು ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಸದ್ಯದಲ್ಲಿಯೇ ಬ್ರೇಕ್ ಹಾಕುತ್ತೇವೆ ಎಂದು ಕುಮಾರಸ್ವಾಮಿಯವರು ತಿಳಿಸಿದರು.
Comments