'ಜನತಾ ದರ್ಶನ'ದಲ್ಲಿ ಬೇಸರಗೊಂಡ ಸಿಎಂ ಕುಮಾರಸ್ವಾಮಿ..!

ರಾಜ್ಯದ ಮುಖ್ಯಮಂತ್ರಿಯಾದ ದಿನವೇ ಪ್ರತಿ ನಿತ್ಯ ಜನತಾ ದರ್ಶನ ಮಾಡಿ, ಜನರ ಸಮಸ್ಯೆ ಏನು ಎಂಬುದನ್ನು ಕೇಳಿ ಅದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೆಲಸ ಮಾಡುತ್ತಿದ್ದರು.. ಆದರೆ ಇದೀಗ ಜನತಾ ದರ್ಶನ ಮಾಡುವುದು ಕಡಿಮೆಯಾಗಿದೆ. ಇದೀಗ ಚನ್ನ ಪಟ್ಟಣದಲ್ಲಿ ಕುಮಾರಸ್ವಾಮಿಯವರು ಜನತಾ ದರ್ಶನ ಮಾಡಿದ್ದಾರೆ. ನಾನು ಮುಖ್ಯಮಂತ್ರಿಯೇ ಆಗಿರಬಹುದು,ಆದರೆ ನನಗಿರುವ ನೋವನ್ನು ನಿಮಗೆ ಹೇಳಲು ಆಗುತ್ತಿಲ್ಲ. ತಾನೇ ನೋವು ಹೇಳಿಕೊಂಡರೆ ನೀವು ಏನು ಮಾಡುತ್ತೀರಿ ಎಂದು ಸಿಎಂ ಹೆಚ್ಡಿಕೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಚನ್ನಪಟ್ಟಣದ ಜನತಾ ದರ್ಶನದಲ್ಲಿ ಮಾತನಾಡಿದ ಕುಮಾರಸ್ವಾಮಿಯವರು ಸರ್ಕಾರವನ್ನು ಮುಂದೆ ನಾಲ್ಕು ವರ್ಷ ಹೇಗೆ ನಡೆಸಬೇಕು ಎಂಬುದು ನನಗೆ ಗೊತ್ತಿದೆ. ಮಂಡ್ಯ, ಮೈಸೂರು, ತುಮಕೂರಿನ ಜನ ಅಪಾರ ಪ್ರೀತಿ ಕೊಟ್ಟರೂ ಕೂಡ ಯಾರು ನನ್ನ ಅರ್ಥ ಮಾಡಿಕೊಳ್ಳಲಿಲ್ಲ ಎಂಬ ನೋವು ನನಗಿದೆ ಎಂದು ತಿಳಿಸಿದರು. ಕಂದಾಯ ಇಲಾಖೆಯಲ್ಲಿ ಹಲವಾರು ದೂರ ಬಂದಿದೆ ಇಂದೇ ಇಬ್ಬರನ್ನು ತೆಗೆದುಹಾಕಬೇಕು ಅಂದುಕೊಂಡಿದ್ದೆ, ಆದರೆ ಕೊನೆಯದಾಗಿ ಎಚ್ಚರಿಕೆ ನೀಡುತ್ತೇನೆ, ಒಂದು ತಿಂಗಳಲ್ಲಿ ಸರಿಪಡಿಸಿ ನಂತರ ಕಣ್ಣೀರು ಸುರಿಸುತ್ತಾ ಬರಬೇಡಿ ಎಂದರು. ಒಟ್ಟಿನಲ್ಲಿ ರಾಜ್ಯ ರಾಜಕಾರಣದ ಲೋಕಸಭಾ ಚುನಾವಣೆಯು ಕುಮಾರಸ್ವಾಮಿಯವರಿಗೆ ನೋವು ಉಂಟು ಮಾಡಿದೆ.. ಜನರಿಗೆ ಎಷ್ಟೆ ಪ್ರೀತಿ ತೋರಿಸಿದರೂ ಕೂಡ ಯಾರು ನನ್ನನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
Comments