‘ಸಿಎಂ ಕುಮಾರಸ್ವಾಮಿಯದ್ದು ಶೋಕಿ ಗ್ರಾಮ ವಾಸ್ತವ್ಯ’ ಹೀಗೆ ಹೇಳಿದ್ದು ಯಾರು..?

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯ ಅಖಾಡದಿಂದ ನಿಖಿಲ್ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು… ಅದೇ ರೀತಿಯಲ್ಲಿ ದೇವೆಗೌಡರು ಕೂಡ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು.. ಇದೇ ಹಿನ್ನಲೆಯಲ್ಲಿ ಕುಮಾರಸ್ವಾಮಿಯವರು ಕೂಡ ಬೇಸರ ವ್ಯಕ್ತ ಪಡಿಸಿದ್ದರು.. ಇದೀಗ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯವನ್ನು ಶುರು ಮಾಡಿಕೊಂಡಿದ್ದಾರೆ.. ವಿರೋಧ ಪಕ್ಷದವರು ಕೂಡ ಅದಕ್ಕೆ ಟೀಕೆಯನ್ನು ಮಾಡುತ್ತಾ ಬಂದಿದ್ದಾರೆ.
ಸಿಎಂ ಗ್ರಾಮ ವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ. ಸಿಎಂ ಕುಮಾರಸ್ವಾಮಿಯದ್ದು ಶೋಕಿ ಗ್ರಾಮ ವಾಸ್ತವ್ಯ ಎಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.ಇದರಿಂದ ಮೂರು ಕಾಸಿನ ಲಾಭವಿಲ್ಲ. ಅವರು ಹೋದಲ್ಲಿ ಕೆಲ ಜೆಡಿಎಸ್ ಕಾರ್ಯಕರ್ತರು, ಕೆಲ ಅಧಿಕಾರಿಗಳು ತುಂಬಿಕೊಳ್ತಾರೆ ಅಷ್ಟೇ. ಇದೊಂದು ಥರ ರಾಜಕಾರಣಿಗಳ ಶೋಕಿ ಇದ್ದಂತೆ ಎಂದು ಕಿಡಿ ಕಾರಿದ್ದಾರೆ… ತುಂಬಾ ಹಿಂದೆಯೂ ಕೂಡ ಗ್ರಾಮ ವಾಸ್ತವ್ಯವನ್ನು ಮಾಡಿದ್ದರು.. ಆದರೆ ಯಾವ ಪ್ರಯೋಜನವಾಗಿದೆ ನೀವೆ ಹೇಳಿ ಎಂದು ಪ್ರಶ್ನೆ ಮಾಡಿದರು. ಗ್ರಾಮಗಳ ಅಭಿವೃದ್ದಿ ಕೆಲಸವನ್ನು ಮಾಡಬೇಕಾಗಿದೆ.. ಆದನ್ನು ಬಿಟ್ಟು ಸುಖಾಸುಮ್ಮನೆ ರೀತಿ ಗ್ರಾಮ ವಾಸ್ತವ್ಯ ಮಾಡಿಕೊಂಡು ಸಮಯ ವ್ಯರ್ಥ ಮಾಡಬಾರದು ಎಂದಿದ್ದಾರೆ.
Comments