ಸುಮಲತ ಅವರನ್ನು ನೋಡಿ ಕಲಿರಿ ಎಂದು ಬಿಜೆಪಿ ಸಚಿವ ಹೇಳಿದ್ಯಾರಿಗೆ..?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಅಖಾಡ ಸಖತ್ ಸದ್ದು ಮಾಡಿತ್ತು.. ದೋಸ್ತಿ ಅಭ್ಯರ್ಥಿಯಾಗಿ ನಿಖಿಲ್ ಮಂಡ್ಯ ಅಖಾಡದಿಂದ ಕಣ್ಕಕೆ ಇಳಿದಿದ್ದರು..ಹಾಗೂ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಇಬ್ಬರ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು…ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅಂಬರೀಶ್ ನಿಖಿಲ್ ವಿರುದ್ದ ಜಯಶಾಲಿಯಾದರು.. ಚುನಾವಣೆಯಲ್ಲಿ ಸುಮಲತಾ ಅವರನ್ನು ವಿರೋಧ ಪಕ್ಷಗಳು ಎಷ್ಟೆ ಹಿಯಾಳಿಸಿದರೂ ಕೂಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ.
ಇದೀಗ ಸುಮಲತಾ ಅವರನ್ನು ಕೇಂದ್ರ ಸಚಿವರಾದ ಸದಾನಂದಗೌಡರವರು ಹಾಡಿ ಹೊಗಳಿದ್ದಾರೆ. ಜೆಡಿಎಸ್ ಪಕ್ಷದವರು ಸುಮಲತಾ ಅವರನ್ನು ನೋಡಿ ಕಲಿಯಬೇಕಿದೆ.. ಅವರ ಪ್ರಭುದ್ದತೆಯನ್ನು ಜೆಡಿಎಸ್ ಅವರು ಕಲಿಯಬೇಕಿದೆ.. ಇಡಿ ಜನ್ಮ ಕಳೆದರೂ ಸುಮಲತಾರಿಂದ ಕಲಿಯೋದು ಸಾಧ್ಯವಿಲ್ಲ… ಎಂದು ಸದಾನಂದ ಗೌಡರು ತಿಳಿಸಿದರು.. ಅಷ್ಟೆ ಅಲ್ಲದೆ ಡಿಸಿ ತಮ್ಮಣ್ಣ ವಿರುದ್ದ ಸದಾನಂದ ಗೌಡ ವಾಗ್ದಾಳಿ ನಡೆಸಿದ್ದಾರೆ.. ಇತ್ತಿಚಿಗಷ್ಟೆ ಡಿಸಿ ತಮ್ಮಣ್ಣ ವಿರುದ್ದ ಸುಮಲತಾ ಅವರು ಕೂಡ ಕಿಡಿ ಕಾರಿದ್ದರು. ಬಿಜೆಪಿಯವರ ಕಚೇರಿಗೆ ಸುಮಲತಾ ಭೇಟಿ ಕೊಟ್ಟು ಅವರ ಗೆಲುವಿಗೆ ಕಾರಣರಾದವರಿಗೆ ಧನ್ಯವಾದವನ್ನು ತಿಳಿಸಿದರು.. ಅಷ್ಟೆ ಅಲ್ಲದೆ ನಿಖಿಲ್ ಮಾತನ್ನು ಕೂಡ ವ್ಯಂಗ್ಯ ಮಾಡಿದ್ದಾರೆ…..ಮಧ್ಯಂತರ ಚುನಾವಣೆಯ ಬಗ್ಗೆ ಮಾತನಾಡುವಷ್ಟು ನಿಖಿಲ್ ದೊಡ್ಡವನಾಗಿದ್ದಾನೆ ಎಂದು ವ್ಯಂಗ ಮಾಡಿದರು. ನಿಖಿಲ್ ಇಷ್ಟು ದೊಡ್ಡ ರಾಜಕಾರಣಿ ಆದ್ರಲ್ಲ ಎಂದು ಕೂಡ ವ್ಯಂಗ್ಯವನ್ನು ಮಾಡಿದರು. ಈ ಹಿನ್ನಲೆಯಲ್ಲಿ ಸುಮಲತಾ ಅವರನ್ನು ಡಿ ವಿ ಸದಾನಂದ ಗೌಡರು ಹಾಡಿ ಹೊಗಳಿದ್ದಾರೆ.
Comments