ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಡಲಿ ಎಂದು ಜೆಡಿಎಸ್ ನಾಯಕನ ವಿರುದ್ದ ಕಿಡಿಕಾರಿದ ಸಂಸದೆ ಸುಮಲತಾ ಅಂಬರೀಶ್..!!

ಮಂಡ್ಯದ ಅಖಾಡ ಈ ಬಾರಿ ಲೋಕಸಮರದಲ್ಲಿ ಹೆಚ್ಚು ಸದ್ದು ಮಾಡಿತ್ತು.. ಇಡೀ ಇಂಡಿಯಾವೇ ಒಮ್ಮೆ ಮಂಡ್ಯದ ಕಡೆ ತಿರುಗಿ ನೋಡಿತ್ತು… ಆ ಸಂದರ್ಭದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ದೋಸ್ತಿಯ ಕೆಲವು ನಾಯಕರು ಮಾತುಗಳಿಂದ ನಿಂದನೆ ಮಾಡಿದರು.. ಆ ಸಮಯದಲ್ಲಿ ಸುಮಲತಾ ಅಂಬರೀಶ್ ಯಾರ ಮಾತಿಗೂ ತಲೆಕೆಡಿಸಿಕೊಂಡಿರಲಿಲ್ಲ… ಆ ಮಾತಿಗೆಲ್ಲಾ ಸುಮಲತಾ ಅಂಬರೀಶ್ ಗೆಲುವಿನ ಮೂಲಕ ಉತ್ತರ ನೀಡಿದ್ದಾರೆ. ಇದೀಗ ಸಚಿವ ಡಿಸಿ ತಮ್ಮಣ್ಣ ವಿರುದ್ದ ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ.
ಸಮಸ್ಯೆ ಹೇಳಿಕೊಳ್ಳಲು ಬಂದ ಜನರನ್ನು ತರಾಟೆ ತೆಗೆದುಕೊಂಡ ಸಚಿವ ಡಿ.ಸಿ. ತಮ್ಮಣ್ಣ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ. ಮಾಧ್ಯಮವರೊಂದಿಗೆ ಮಾತನಾಡಿದ ಸುಮಲತಾ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಬೇಜಾರಾಗಿದ್ರೆ ರಾಜೀನಾಮೆ ಕೊಡಿ, ಜೆಡಿಎಸ್ ಸೋಲಿಗೆ ಡಿ.ಸಿ. ತಮ್ಮಣ್ಣ ಅವರ ಹೇಳಿಕೆಯೇ ಕಾರಣ, ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿನ ಕಾಮಗಾರಿಯ ಶಂಕು ಸ್ಥಾಪನೆ ವೇಳೆ ಜನರು ಡಿ.ಸಿ. ತಮ್ಮಣ್ಣ ಬಳಿ ಸಮಸ್ಯೆ ಹೇಳಿಕೊಳ್ಳಲು ಹೋಗಿದ್ದಾಗ ಅಭಿವೃದ್ಧಿಗೆ ನಾವು ಬೇಕು, ವೋಟಿಗೆ ಅವರು ಬೇಕಾ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಹಾಗಾಗಿ ಡಿಸಿ ತಮ್ಮಣ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ, ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಕಿಡಿಕಾರಿದ್ದಾರೆ.
Comments