ನಿಖಿಲ್ ಕುಮಾರಸ್ವಾಮಿ ಹೆಗಲಿಗೆ ಬಿತ್ತು ಮತ್ತೊಂದು ಜವಬ್ದಾರಿ..!! ಏನ್ ಗೊತ್ತಾ..?

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಅಖಾಡ ಈ ಬಾರಿ ಹೆಚ್ಚು ಸುದ್ದಿ ಮಾಡಿತ್ತು..ದೋಸ್ತಿ ನಾಯಕರ ಪರವಾಗಿ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅಖಾಡಕ್ಕೆ ಇಳಿದಿದ್ದರು.. ಇಬ್ಬರ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು… ಆದರೆ ನಿಖಿಲ್ ಮುಂದೆ ಸುಮಲತಾ ವಿಜಯಶಾಲಿಯಾಗಿ ಹೊರಹೊಮ್ಮಿದ್ದರು..ನಿಖಿಲ್ ಕುಮಾರಸ್ವಾಮಿಯವರು ಮಂಡ್ಯ ಅಖಾಡದಿಂದ ದೂರ ಉಳಿಯಬಾರದು ಎಂದು ಅವರಿಗೆ ಮತ್ತೊಂದು ಜವಬ್ದಾರಿವನ್ನು ವಹಿಸಲಾಗಿದೆ.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಯುವ ಘಟಕದ ಜವಾಬ್ದಾರಿ ನೀಡಲು ಕೆಲ ನಾಯಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ನಡೆದ ಜೆಡಿಎಸ್ ಶಾಸಕರ ಸಭೆಯಲ್ಲಿ ಕೆಲ ಶಾಸಕರು ಜೆಡಿಎಸ್ ಯುವ ಘಟಕದ ಸ್ಥಾನಕ್ಕಾಗಿ ನಿಖಿಲ್ ಕುಮಾರ್ ಪರ ವಾದ ಮಾಡಿದರೆ, ಮತ್ತೆ ಕೆಲವರು ಪ್ರಜ್ವಲ್ ಪರ ವಾದ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತಿಮ ನಿರ್ಧಾರವನ್ನು ವರಿಷ್ಠರೇ ಕೈಗೊಳ್ಳಬೇಕು ಎಂದು ನಿಖಿಲ್ ತಿಳಿಸಿದ್ದಾರೆ…. ಪಕ್ಷವನ್ನು ಬಲಿಷ್ಟಗೊಳಿಸಲು ಎಲ್ಲರೂ ಕೂಡ ಶ್ರಮ ಪಡಬೇಕು… ಹಾಗಾಗಿ ಎಲ್ಲರೂ ಕೂಡ ಕೈ ಜೋಡಿಸಿ ಕೆಲಸವನ್ನು ಮಾಡಬೇಕು ಎಂದಿದ್ದಾರೆ…
Comments