ಸಿಎಂ ಕುಮಾರಸ್ವಾಮಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಎಸ್ ವೈ
ರಾಜಕೀಯದಲ್ಲಿ ಆರೋಪಗಳು, ಪ್ರತ್ಯಾರೋಪಗಳು ಕೇಳಿ ಬರುವುದು ಕಾಮನ್ ಆಗಿ ಬಿಟ್ಟಿದೆ… ಒಬ್ಬರ ಮೇಲೆ ಒಬ್ಬರು, ಆ ಪಕ್ಷದವರ ಮೇಲೆ ಈ ಪಕ್ಷದವರು, ಈ ಪಕ್ಷದವರ ಮೇಲೆ ಆ ಪಕ್ಷದವರು ಆರೋಪ ಮಾಡುವುದು ರಾಜಕೀಯ ವಲಯದಲ್ಲಿ ಹೊಸದೇನಲ್ಲ… ಇದೀಗ ಸಿಎಂ ಕುಮಾರಸ್ವಾಮಿಯವರ ವಿರುದ್ದ ಬಿಎಸ್ ಯಡಿಯೂರಪ್ಪನವರು ಕೂಡ ಹೊಸಬಾಂಬ್ ಸಿಡಿಸಿದ್ದಾರೆ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕಿಕ್ ಬ್ಯಾಕ್ ಪಡೆದು ಜಿಂದಾಲ್ ಗೆ ಭೂಮಿ ಮಾರಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಕಿಕ್ ಬ್ಯಾಕ್ ಪಡೆದು ಕುಮಾರಸ್ವಾಮಿ ಜಿಂದಾಲ್ ಗೆ ಭೂಮಿ ನೀಡಲು ಮುಂದಾಗಿದ್ದಾರೆ. ನಾವು ಧ್ವನಿ ಎತ್ತಿದ್ದರಿಂದ ಈಗ ನೀಡುವ ಭೂಮಿಯಲ್ಲಿ ಅದಿರು ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಭೂಮಿ ನೀಡಿದ ಮೇಲೆ ಈ ನಿಯಮಗಳನ್ನು ಅವರು ಪಾಲಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.. ಜಿಂದಾಲ್ ಹಗರಣ, ಬರಗಾಲ ಸೇರಿದಂತೆ ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಜೂನ್ 13 ಮತ್ತು 14 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಕುಮಾರಸ್ವಾಮಿ ಸಿಎಂ ಆಗಿ ಐಷಾರಾಮಿ ಹೋಟೆಲ್ ಗಳಲ್ಲಿ ವಾಸ್ತವ್ಯ ಮಾಡುವುದು ಸರಿಯಲ್ಲ. ಅದು ಅವರಿಗೆ ಶೋಭೆ ತರುವುದಿಲ್ಲ ಎಂದು ಯಡಿಯೂರಪ್ಪನವರು ತಿಳಿಸಿದ್ದಾರೆ.. ಲೋಕಸಭಾ ಚುನಾವಣೇಯ ಫಲಿತಾಂಶ ಬಂದ ಹೊಸ್ತಿಲಲ್ಲಿಯೇ ಸಾಕಷ್ಟು ಬದಲಾವಣೆಗಳು ರಾಜ್ಯ ಸರ್ಕಾರದಲ್ಲಿ ಆಗುತ್ತಿವೆ.. ಈ ನಡುವೆ ಸರ್ಖಾರ ಪತನವಾಗುತ್ತದೆ ಎಂಬ ಹೇಳಿಕೆಯನ್ನು ಸಾಕಷ್ಟು ಬಿಜೆಪಿ ನಾಯಕರು ತಿಳಿಸಿದ್ರು.. ಇದೀಗ ನಾವು ಆಪರೇಷನ್ ಕಮಲಕ್ಕೆ ಕೈ ಹಾಕಲ್ಲ.. ಸರ್ಕಾರವೇ ತನ್ನಿಂದ ತಾನೆ ಪತನವಾಗುತ್ತದೆ ಎಂದಿದ್ದಾರೆ.. ಮುಂಬರುವ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments