ಮೊದಲ ಬಾರಿ ಸಂಸತ್ ಪ್ರವೇಶಿಸಿ ಸಂಸದೆ ಸುಮಲತಾ ಹೇಳಿದ್ದೇನು ಗೊತ್ತಾ..?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಅಖಾಡ ಹೆಚ್ಚು ಸದ್ದು ಮಾಡಿತ್ತು..ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ನಿಖಿಲ್ ವಿರುದ್ದ ಬಹು ಅಂತರದಿಂದ ವಿಜಯಶಾಲಿಯಾದರು.. ಈ ಬಗ್ಗೆ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆ ಕೂಡ ಆಯಿತು… ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದ ಮೇಲೆ ಬಿಜೆಪಿಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.. ಆದರೆ ಸುಮಲತಾ ಮಾತ್ರ ಪಕ್ಷೇತರವಾಗಿಯೇ ಕೆಲಸಗಳನ್ನು ಮಾಡುತ್ತೆನೆ ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ , ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರಿ ಅಂತರದಿಂದ ಜಯಗಳಿಸಿದ ಸುಮಲತಾ ಅಂಬರೀಶ್ ಮೊದಲ ಬಾರಿಗೆ ಲೋಕಸಭೆಗೆ ತೆರಳಿದ್ದಾರೆ. ಈ ನಡುವೆ ಸುಮಲತಾ ಅಂಬರೀಶ್ ಗುರುವಾರ ಸಂಸತ್ ಭವನದ ಎದುರು ಫೋಟೋ ತೆಗೆಸಿಕೊಂಡು ಅದನ್ನು ತಮ್ಮ ಫೇಸ್‌ಬುಕ್ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ಪ್ರಜಾಪ್ರಭುತ್ವದ ದೇಗುಲಕ್ಕೆ ಇದೊಂದು ಸುದೀರ್ಘ ಪಯಣ. ಜೈ ಹಿಂದ್, ಜೈ ಕರ್ನಾಟಕ. ಇದೊಂದು ಹೆಮ್ಮೆ, ಗೌರವದ ಸಂಗತಿ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸುಮಲತಾ ಮೊದಲ ಬಾರಿಗೆ, ಸಂಸತ್ ಪ್ರವೇಶ ಮಾಡಿದ್ದಾರೆ.. ಮುಂದೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments