ಮಧ್ಯಂತರ ಚುನಾವಣೆಯ ಸುಳಿವು ಕೊಟ್ಟ ನಿಖಿಲ್ ಕುಮಾರ್..!? ಹಾಗಾದಾರೆ ಚುನಾವಣೆ ನಡೆಯುತ್ತಾ..?
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಅಖಾಡದಿಂದ ನಿಖಿಲ್ ಸುಮಲತಾ ವಿರುದ್ದ ಅಖಾಡಕ್ಕೆ ಇಳಿದಿದ್ದರು.. ಆದರೆ ಸುಮಲತಾ ವಿರುದ್ದ ನಿಖಿಲ್ ಸೋಲನ್ನ ಅನುಭವಿಸಿದರು.. ಸೋತರು ಸರಿಯೇ ನಾನು ಮಂಡ್ಯದ ಜನತೆಯ ಪರವಾಗಿ ಯೇ ಮಾತನಾಡುತ್ತಿದ್ದಾರೆ... ಫಲಿತಾಂಶದಿಂದಾಗಿ ಸರ್ಕಾರ ಬೀಳುವ ಹಂತದಲ್ಲಿದೆ ಎಂಬುದು ಕೆಲವರ ಮಾತಾಗಿದೆ… ಇದೇ ಹಿನ್ನಲೆಯಲ್ಲಿಯೇ ನಿಖಿಲ್ ಕುಮಾರಸ್ವಾಮಿ ಕೊಟ್ಟಿರುವ ಹೇಳಿಕೆಯೊಂದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮುಖ್ಯಮಂತ್ರಿಯಾಗಿ ಸಿಎಂ ಕುಮಾರಸ್ವಾಮಿ ಅವರು ಆಡಳಿತ ನಡೆಸುವುದು ಖಚಿತ, ಆದರೂ ಕೂಡ ವಿಧಾನಸಭೆ ಚುನಾವಣೆ ಯಾವಾಗ ಬೇಕಾದರು ನಡೆಯಬಹುದು ಹಾಗಾಗಿ ಈಗಿನಿಂದಲೇ ಚುನಾವಣೆ ಎದುರಿಸಲು ಸಿದ್ದವಾಗಿರಬೇಕು.. ಎಂದು ಹೇಳಿಕೆ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋವನ್ನು ಸುನೀಲ್ ಗೌಡ ದಂಡಿಗಾನಹಳ್ಳಿ ಎಂಬುವರು ತಮ್ಮ ಪೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸುಮಾರು 42 ಸೆಕೆಂಡ್ ಗಳ ವಿಡಿಯೋದಲ್ಲಿ ಒಮ್ಮೆ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರೆ ನಂತರ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ. ಜೆಡಿಎಸ್ ಕಾರ್ಯಕರ್ತರು ತಯಾರಾಗಿರಿ ಎಂಬ ಅರ್ಥದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಸರ್ಕಾರ ಬೀಳುತ್ತದೆ ಎಂಬ ಭಯ ದೋಸ್ತಿ ಸರ್ಕಾರಕ್ಕೆ ಕಾಡುತ್ತಿದೆ…
Comments