ಕಾಂಗ್ರೆಸ್' ಸೋಲಿಗೆ ದೇವೇಗೌಡ, ಸಿದ್ದರಾಮಯ್ಯ ಕಾರಣ ಎಂಬ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ ಶಾಸಕ

ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಸಾಕಷ್ಟು ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ಕಂಡು ಬರುತ್ತಿವೆ.. ಆರೋಪ ಮತ್ತು ಪ್ರತ್ಯಾರೋಪಗಳ ನಡುವೆಯೂ ಕೂಡ ಪಕ್ಷಾಂತರಗಳು ನಡೆಯುತ್ತಿವೆ.. ಲೋಕಸಮರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಹೆಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ನೇರ ಕಾರಣ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎ. ಮಂಜು ಇದೀಗ ಟೀಕೆ ಮಾಡಿದ್ದಾರೆ..
ಮಾಧ್ಯಮದವರೊಂದಿಗೆ ಮಾತನಾಡಿದ ಮಂಜು ಕಾಂಗ್ರೆಸ್ ನಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಯಾವುದೇ ಸ್ಥಾನಮಾನಗಳು ದೊರಕುತ್ತಿಲ್ಲ… ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹು ಮತಗಳಿಂದ ಗೆಲ್ಲಿಸಿದರೂ ರಾಜೀನಾಮೆ ನೀಡಿ ಮನೆಗೆ ಹೋಗೋದು ಬಿಟ್ಟು ಅಧಿಕಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ನಿಷ್ಠಾವಂತರಿಗಿಂತ ತಲೆಬಾಗುವವರಿಗೆ ಮಾತ್ರ ಹೆಚ್ಚಿನ ಲಾಭವಿದೆ ಎಂದು ತಿಳಿಸಿದರು. ದೇವೇಗೌಡರು ಮತ್ತು ಮಕ್ಕಳ ಪಕ್ಷದಲ್ಲಿ ಅಧಿಕಾರವೆಲ್ಲಾ ಅವರ ಕುಟುಂಬದವರಿಗೆ ಆಗಬೇಕು. ಬೇರೆಯವರಿಗೆ ಅಲ್ಲಿ ಅವಕಾಶವೇ ಇಲ್ಲ.. ಕುಟುಂಬ ರಾಜಕಾರಣಕ್ಕೆ ಜನತೆ ತಕ್ಕ ಪಾಠ ಕಲಿಸಿದೆ ಎಂದು ಎ ಮಂಜು ತಿಳಿಸಿದರು. ಒಟ್ಟಾರೆಯಾಗಿ ಆರೋಪಗಳು ಪ್ರತ್ಯಾರೋಪಗಳು ರಾಜಕೀಯ ವಲಯದಲ್ಲಿ ಹೊಸದೇನಲ್ಲ…ಇದೆಲ್ಲಾ ರಾಜಕೀಯದಲ್ಲಿ ದಿನ ನಿತ್ಯವು ಕೂಡ ನಡೆಯುತ್ತಲೆ ಇರುತ್ತವೆ… ಅದಕ್ಕೆಅನ್ನಿಸುತ್ತದೆ ರಾಜಕೀಯವನ್ನು ದೊಂಬರಾಟ ಎನ್ನುವುದು
Comments