ಜೆಡಿಎಸ್ ಪಾಲಿನ 2 ಸಚಿವ ಸ್ಥಾನಗಳು ಇವರಿಗೆ ಫಿಕ್ಸ್..!!

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಕೇವಲ ಒಂದೊಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿವೆ. ಮೈತ್ರಿ ಸರ್ಕಾರ ಈ ಬಾರಿ ಹೀನಾಯ ಸೋಲನ್ನು ಅನುಭವಿಸಿದೆ.. ದೋಸ್ತಿ ಸರ್ಕಾರದ ಕಾರ್ಯವೈಖರಿ ಕುರಿತು ಆಡಳಿತ ಪಕ್ಷದ ಸಾಕಷ್ಟು ಶಾಸಕರುಗಳು ಅಸಮಾಧಾನ ವ್ಯಕ್ತಪಡಿಸತೊಡಗಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷದವರು ಇದರ ಲಾಭ ಪಡೆದುಕೊಂಡು ಅತೃಪ್ತ ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ.
ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರ ಮನವೊಲಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಅಖಾಡಕ್ಕಿಳಿದಿದ್ದಾರೆ.. ರಮೇಶ್ ಜಾರಕಿಹೊಳಿಯವರ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಮಹೇಶ್ ಕುಮಟಳ್ಳಿ ಅವರ ಮೂಲಕ ಸಂಧಾನ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.ಅಷ್ಟೆ ಅಲ್ಲದೆ ಇದರ ಜೊತೆಗೆ ಪಕ್ಷೇತರ ಶಾಸಕರುಗಳಾದ ಆರ್. ಶಂಕರ್ ಹಾಗೂ ನಾಗೇಶ್ ಅವರುಗಳನ್ನು ಸೆಳೆಯಲು ಮುಂದಾಗಿದ್ದು, ಈ ಇಬ್ಬರಿಗೆ ಜೆಡಿಎಸ್ ಪಾಲಿನ ಖಾಲಿ ಉಳಿದಿರುವ 2 ಸಚಿವ ಸ್ಥಾನಗಳನ್ನು ನೀಡಲು ಸಿದ್ಧತೆ ನಡೆದಿದೆ. ಅತೃಪ್ತ ಶಾಸಕರನ್ನು ಮನವೊಲಿಸಲು ಕುಮಾರಸ್ವಾಮಿಯವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.. ಯಾರು ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ದೋಸ್ತಿ ಸರ್ಕಾರ ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ..
Comments