ಜಿಟಿ ದೇವೆಗೌಡರು ಬಿಜೆಪಿ ಗೆ ಸೇರಿಕೊಳ್ತಾರ..?!!
ರಾಜಕೀಯದಲ್ಲಿ ಪಕ್ಷಾಂತರ ಪರ್ವ ಜೋರಾಗಿಯೇ ನಡೆಯುತ್ತಿದೆ.. ಲೋಕಸಭಾ ಚುನಾವಣೆಯು ಶುರುವಾಗಿನಿಂದಲೂ ಕೂಡ ಅತೃಪ್ತ ಶಾಸಕರು ಪಕ್ಷ ಬಿಟ್ಟು ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಈ ನಡುವೆ ಜಿಟಿ ದೇವೆಗೌಡರು ಕೂಡ ಬಿಜೆಪಿ ಗೆ ಸೇರಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಪ್ರಧಾನಿ ಮೋದಿ ಅವರನ್ನು ಬಹಿರಂಗವಾಗಿ ಹೊಗಳಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರು ಬಿಜೆಪಿ ಸೇರ್ಪಡೆ ಕುರಿತು ಇದೀಗ ಸ್ಪಷ್ಟನೆಯನ್ನು ನೀಡಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರ್ಪಡೆಯಾಗುವ ಪ್ರಮೇಯವೇ ಇಲ್ಲ ಎಂದು ಖಡಕ್ ಆಗಿಯೇ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಜಿಟಿ ದೇವೆಗೌಡರು ನಾನು ಬಿಜೆಪಿಯಲ್ಲಿಯೇ 5 ವರ್ಷ ಇದ್ದು ನಂತರ ಇಲ್ಲಿಗೆ ಬಂದಿದ್ದೇನೆ. ಅಲ್ಲಿಯ ನಾಯಕರು ಹೇಗೆ? ಏನು ಎನ್ನುವುದನ್ನು ನಾನು ಈಗಾಗಲೇ ನೋಡಿ ಬಂದಿದ್ದೇನೆ… ಎಲ್ಲ ಪಕ್ಷದಲ್ಲೂ ನನ್ನ ಸ್ನೇಹಿತರು ಇದ್ದಾರೆ. ನಾವೆಲ್ಲ ಚರ್ಚೆಗಳನ್ನು ಮಾಡುತ್ತಲೇ ಇರುತ್ತೇವೆ. ಉಳಿದ ನಾಲ್ಕು ವರ್ಷ ಕುಮಾರಸ್ವಾಮಿ ಅವರೇ ಸಿಎಂ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಯಾರ್ಯಾರು ಯಾವ ಪಕ್ಷಕ್ಕೆ ಹೋಗಲಿದ್ದಾರೆ, ರಾಜ್ಯ ರಾಜಕೀಯದಲ್ಲಿ ಯಾವೆಲ್ಲಾ ರೀತಿಯ ಬದಲಾವಣೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
Comments