ಮುಂಬರುವ ಒಂದು ವಾರದೊಳಗೆ ಜೆಡಿಎಸ್’ನ ಮತ್ತೊಂದು ವಿಕೇಟ್ ಪತನ..!!

ಇತ್ತಿಚಿಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ.. ತಮ್ಮ ತಮ್ಮ ಸ್ವ ಪಕ್ಷಗಳಲ್ಲಿಯೇ ಜಗಳಗಳು, ಕಿತ್ತಾಟಗಳು ನಡೆಯುತ್ತಿವೆ. ಅತೃಪ್ತ ಶಾಸಕರು ಪಕ್ಷ ಬಿಟ್ಟು ಪಕ್ಷಕ್ಕೆ ಹಾರುತ್ತಿದ್ದಾರೆ.. ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದ ಮೇಲೆ ದೋಸ್ತಿ ಸರ್ಕಾರದಲ್ಲಿ ಒಂದು ರೀತಿಯ ಆತಂಕ ಶುರುವಾಗಿದೆ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೇಸರಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ಮುಂಬರುವ ಬರುವ 2-3 ದಿನಗಳಲ್ಲಿ ಅಥವಾ ಒಂದು ವಾರದೊಳಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ರಾಜೀನಾಮೆ ಸ್ವೀಕರಿಸುವಂತೆ ಮನವೊಲಿಸಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಎರಡು ಬಾರಿ ಈಗಾಗಲೇ ವಿಶ್ವನಾಥ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು. ಅಷ್ಟೆ ಅಲ್ಲದೆ ಈ ಬಗ್ಗೆ ಬಹಿರಂಗವಾಗಿಯೂ ಕೂಡ ಪ್ರಸ್ತಾಪ ಮಾಡಿದ್ದರು.. ಆದರೆ, ದೇವೇಗೌಡರು ಮಾತ್ರ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.. ಈ ಬಾರಿ ದೇವೇಗೌಡರು ಒಪ್ಪಿದರೂ ಅಥವಾ ಒಪ್ಪದಿದ್ದರೂ ಕೂಡ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯದಿರಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಅತೃಪ್ತ ಶಾಸಕರು ಒಬ್ಬೊಬ್ಬರೇ ಪಕ್ಷ ಬಿಡುತ್ತಿರುವುದು ದೋಸ್ತಿಗಳಲ್ಲಿ ಆತಂಕ ಶುರವಾಗಿರುವ ರೀತಿಯಲ್ಲಿ ಕಾಣುತ್ತಿದೆ. ಈ ಮೊದಲೇ ವಿಶ್ವನಾಥ್ ಅವರು ದೋಸ್ತಿ ನಾಯಕರಿಗೆ ಖಾರವಾಗಿಯೇ ಪತ್ರವನ್ನು ಬರೆದಿದ್ದರು.
Comments