ಸುಮಲತಾ ಬೇರೆ ಪಕ್ಷ ಸೇರಿಕೊಳ್ಳುತ್ತಾರ..!! ಜೆಡಿಎಸ್..! ಕಾಂಗ್ರೆಸ್..!! ಬಿಜೆಪಿ ನಾ..!!!
ಈ ಬಾರಿಯ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ದೋಸ್ತಿ ನಾಯಕರ ವಿರುದ್ದ ಗೆಲುವನ್ನು ಸಾಧಿಸಿದ್ದರು..ಇದೀಗ ಸುಮಲತಾ ಅವರು ಕಾಂಗ್ರೆಸ್ ಗೆ ಸೇರಲಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ…
ಈಗಾಗಲೇ ಸಾಕಷ್ಟು ಜನರು ಸುಮಲತಾ ಬಿಜೆಪಿ ಗೆ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.. ಸುಮಲತಾ ಅವರ ಫೋಟೋ ಕಾಂಗ್ರೆಸ್ ಮುಖಂಡರೊಂದಿಗೆ ಕಾಣಿಸಿಕೊಂಡಿರುವ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದು, ಭವಿಷ್ಯದ ರಾಜಕಾರಣಕ್ಕಾಗಿ ಸುಮಲತಾ ಕಾಂಗ್ರೆಸ್ ಸೇರ್ಪಡೆ ಆಗಬಹುದು ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ನಾಯಕರ ಜೊತೆಗೆ ಇರುವ ಭಾವಚಿತ್ರವನ್ನು ನೋಡಿದರೆ ಕಾಂಗ್ರೆಸ್ ಸೇರುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಹೇಳುಲಾಗುತ್ತಿವೆ…ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹುಟ್ಟುಹಬ್ಬಕ್ಕೆ ಶುಭ ಕೋರಿ ಮಂಡ್ಯ ಜಿಲ್ಲಾದ್ಯಂತ ಹಾಕಲಾಗಿರುವ ಫ್ಲೆಕ್ಸ್‌ಗಳಲ್ಲಿ ಸುಮಲತಾ ಫೋಟೋವನ್ನು ಕಾಂಗ್ರೆಸ್ ನಾಯಕರು ಹಾಕಿದ್ದಾರೆ. ಇವೆಲ್ಲಾ ಸುಮಲತಾ ಕಾಂಗ್ರೆಸ್ ಗೆ ಸೇರುತ್ತಾರ ಎಂಬ ಗೊಂದಲಗಳು ಸೃಷ್ಟಿಯಾಗಿವೆ… ಸ್ವಾಭಿಮಾನದಿಂದ ಪಕ್ಷೇತರವಾಗಿಯೇ ಇರುತ್ತಾರ ಅಥವಾ ಕಾಂಗ್ರೆಸ್ ಜೊತೆ ಕೈ ಜೋಡಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
Comments