ಲೋಕಸಮರದಲ್ಲಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿಯೇ ಬಿಜೆಪಿಗೆ ಬಿಗ್’ಶಾಕ್..!!
ನೆನ್ನೆಯಷ್ಟೆ ರಾಜ್ಯದಾದ್ಯಂತ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ.. ಲೋಕಸಮರದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಇಲ್ಲಿ ಕೊಂಚ ಮುಗ್ಗರಿಸಿದೆ. ಕಾಂಗ್ರೆಸ್ ಪುರಸಭೆ, ನಗರಸಭೆಯಲ್ಲಿ ಮೇಲುಗೈ ಸಾಧಿಸಿದ್ದರೆ, ಬಿಜೆಪಿ ಪಟ್ಟಣ ಪಂಚಾಯಿತಿಯಲ್ಲಿ ಮೇಲುಗೈ ಸಾಧಿಸಿದೆ.
714 ಪುರಸಭೆಗಳ ಪೈಕಿ ಬಿಜೆಪಿ 184, ಕಾಂಗ್ರೆಸ್ 322, ಜೆಡಿಎಸ್ಗೆ 102 ಸ್ಥಾನಗಳು ದೊರೆತ್ತಿದ್ದು, ಇತರೆ ಪಕ್ಷಗಳು 106 ಸ್ಥಾನ ಪಡೆದಿದ್ದು ಪುರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಪಟ್ಟಣ ಪಂಚಾಯಿತಿ ಪೈಕಿ ಬಿಜೆಪಿ 126 ಸ್ಥಾನವನ್ನ ಗಳಿಸಿದ್ದರೆ, ಕಾಂಗ್ರೆಸ್ 97 ಸ್ಥಾನ, ಜೆಡಿಎಸ್ 34 ಹಾಗೂ ಇತರೆ ಅಭ್ಯರ್ಥಿಗಳಿಗೆ ಒಟ್ಟು 33 ಸ್ಥಾನದಲ್ಲಿ ಗೆಲುವುಕಂಡಿದ್ದಾರೆ. ಲೋಕಸಮರದಲ್ಲಿ ವಿಜಯವನ್ನು ಸಾಧಿಸಿದ ಬಿಜೆಪಿ ಇಲ್ಲಿ ಕೊಂಡ ಎಡವಿದೆ…. ಕಾಂಗ್ರೆಸ್ ಗೆ ಹೆಚ್ಚು ಸ್ಥಾನಗಳು ಸಿಕ್ಕಿವೆ, ಆದರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕೇವಲ ಒಂದೊಂದು ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿತ್ತು, ಒಟ್ಟಾರೆ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷಗಳು ಗಳಿಸಿರುವ ಸ್ಥಾನಗಳ ವಿವರ ಇಂತಿದೆ. ಕಾಂಗ್ರೆಸ್ 509 ಸ್ಥಾನ ಪಡೆದಿದ್ದರೆ, ಬಿಜೆಪಿ 366 ಸ್ಥಾನ ಗಳಿಸಿದೆ. ಜೆಡಿಎಸ್ 174 ಸ್ಥಾನಗಳನ್ನು ಪಡೆದಿದ್ದು, ಬಿಎಸ್ಪಿ 3 ಸಿಪಿಎಂ 2 ಹಾಗೂ ಇತರೆ 7 ಸ್ಥಾನಗಳಲ್ಲಿ ವಿಜೇತರಾಗಿದ್ದಾರೆ. 160 ಮಂದಿ ಪಕ್ಷೇತರರು ಜಯ ಸಾಧಿಸಿದ್ದಾರೆ.
Comments