ಕುಮಾರಣ್ಣನ ಸರ್ಕಾರದ ಬಗ್ಗೆ ಖಾರವಾಗಿ ಪತ್ರ ಬರೆದ ಸ್ಪೀಕರ್..!!

ಲೋಕಸಭಾ ಸಮರದ ಫಲಿತಾಂಶ ಬಂದ ಮೇಲೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ…20 ತಿಂಗಳ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರದಿಂದ ಯಶಸ್ವಿಯಾಗಿ ಆಡಳಿತ ನಡೆಸಿಕೊಂಡು ಬಂದಿದ್ದೀರಿ.. ಆದರೆ ಇತ್ತಿಚಿನ ದಿನಗಳಲ್ಲಿ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದೀರಿ.. ಎಂದು ಮುಖ್ಯಮಂತ್ರಿಗೆ ಸ್ಪೀಕರ್ ರಮೇಶ್ ಖಾರವಾಗಿಯೇ ಪತ್ರವನ್ನು ಬರೆದಿದ್ದಾರೆ..
ಸರ್ಕಾರದ ವಿರುದ್ಧ, ಸರ್ಕಾರದ ಕಾರ್ಯಕ್ರಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಸ್ಪೀಕರ್ ರಮೇಶ್ ಕುಮಾರ್, ಇದೀಗ ಇತ್ತೀಚಿನ ಸಮ್ಮಿಶ್ರ ಸರ್ಕಾರದ ಆಡಳಿತ, ಒತ್ತಡದಲ್ಲಿ ಆಡಳಿತ ನಡೆಸುತ್ತಿರುವ ಕ್ರಮವನ್ನು ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಪತ್ರದ ಮೂಲಕ ಖಾರವಾಗಿ ತಿಳಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ವಿರುದ್ದ ಈಗಾಗಲೇ ಸಾಕಷ್ಟು ಶಾಸಕರು ಕಿಡಿಕಾರಿದ್ದಾರೆ…ಅತೃಪ್ತ ಶಾಸಕರು ಪಕ್ಷಾಂತರ ಮಾಡುತ್ತಿದ್ದರೆ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ಗ್ಯಾರೆಂಟಿ… ಹಾಗಾಗಿ ಸರ್ಕಾರದ ಕಡೆ ಗಮನ ಕೊಡುವುದು ಮುಖ್ಯವಾಗಿದೆ.. ಬಿಜೆಪಿಯು ಆಪರೇಷನ್ ಕಮಲ ಶುರುಮಾಡಿದ್ದರೆ ಮತ್ತಷ್ಟು ಅಭ್ಯರ್ಥಿಗಳು ಪಕ್ಷ ಬಿಡುವುದು ಗ್ಯಾರೆಂಟಿ.. ನಂತರ ಹೀಗಿರುವ ಸರ್ಕಾರ ಪತನಗೊಂಡರು ಅನುಮಾನ ಪಡಬೇಕಿಲ್ಲ.
Comments