ರಾಜ್ಯಸಭೆಗೆ ದೇವೇಗೌಡರನ್ನು ಆಯ್ಕೆ ಮಾಡದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ತಾರಂತೆ..!?

ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ತುಮಕೂರು ಅಖಾಡದಿಂದ ದೇವೆಗೌಡರು ಸ್ಪರ್ಧಿಸಿ ಸೋಲನ್ನು ಕಂಡರು.ಇದೇ ಕಾರಣಕ್ಕಾಗಿ ಕರ್ನಾಟಕದಿಂದ ರಾಜ್ಯಸಭೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಆಯ್ಕೆ ಮಾಡದಿದ್ದರೆ ಸಂಘಟನೆಯ ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಒಕ್ಕಲಿಗರ ಜಾಗೃತಿ ವೇದಿಕೆ ಎಚ್ಚರಿಕೆಯನ್ನು ನೀಡಿದೆ ಎನ್ನಲಾಗಿದೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಒಕ್ಕಲಿಗರ ವೇದಿಕೆ ಅಧ್ಯಕ್ಷರಾದ ಗಂಗಾಧರ್, ತುಮಕೂರು ಲೋಕಸಭೆ ಚುನಾವಣೆ ಸೋಲಿನಿಂದ ದೇವೇಗೌಡರು ಮತ್ತು ಅವರ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ. ಲೋಕಸಭೆ ಫಲಿತಾಂಶದಿಂದ ನಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ದೆಹಲಿಯಲ್ಲಿ ಧ್ವನಿ ಎತ್ತುವವರು ಯಾರು ಕೂಡ ಇಲ್ಲದಂತಾಗಿದೆ. ಹೀಗಾಗಿ ಹಿರಿಯ ರಾಜಕಾರಣಿಯಾದ ದೇವೇಗೌಡರನ್ನು ದೆಹಲಿಗೆ ಕಳುಹಿಸಬೇಕು,ಹೈಕಮಾಂಡ್ ಗೆ ಶಿಫಾರಸು ಮಾಡುವಂತೆ ಕಾಂಗ್ರೆಸ್ ಮುಖಂಡರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಒಟ್ಟಾರೆಯಾಗಿ ದೇವೆಗೌಡರು ಸೋತಿರುವುದು ದೇವೆಗೌಡರ ಅಭಿಮಾನಿಗಳಿಗೆ ಬಿಗ್ ಶಾಕ್ ಆದಂತೆ ಆಗಿದೆ.. ಯಾರು ಕೂಡ ಊಹಿಸಲಾರದ ಫಲಿತಾಂಶ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಂದಿದೆ. ದೇವೆಗೌಡ ಅವರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕು. ಇಲ್ಲದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ವರಿಷ್ಠರಿಗೆ ಎಚ್ಚರಿಕೆ ನೀಡಿದರು.
Comments