ಸುಮಲತಾ ಅಂಬರೀಶ್‌ಗೆ ಎದುರಾಯ್ತು ಮೊದಲ ಚಾಲೆಂಜ್..! ಯಾವುದು ಗೊತ್ತಾ..?
ಮಂಡ್ಯ ಲೋಕಸಭಾ ಚುನಾವಣೆಯು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು.. ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಬಹುಮತಗಳಿಂದ ಜಯಶಾಲಿಯಾದರು..ಇದೀಗ ಅದರ ಬೆನ್ನಲ್ಲೆ ಸುಮಲತಾ ಅವರು ಹೊಸ ಚಾಲೆಂಜ್ ಒಂದು ಎದುರಾಗಿದೆ.. ಕಾವೇರಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಪ್ರತಿ ಬಾರಿ ನಮ್ಮ ರಾಜ್ಯ ಹಾಗೂ ತಮಿಳು ನಾಡು ರಾಜ್ಯದ ನಡುವೆ ಗದ್ದಲ ಜೋರಾಗಿಯೆ ನಡೆಯುತ್ತದೆ.
ಇದೆಲ್ಲದರ ನಡುವೆ ಇಂದು ಕಾವೇರಿ ಪ್ರಾಧಿಕಾರದ ಸಭೆ ಪ್ರಾರಂಭವಾಗಿದ್ದು ಸಭೆಯಲ್ಲಿ ಯಾವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂಬುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ ರಾಜ್ಯದಲ್ಲಿ ಹೆಚ್ಚು ಬರಗಾಲ ಎದುರಾಗಿದೆ. ಕೆಆರ್‌ಎಸ್‌ನಲ್ಲಿ ಸಾಕಷ್ಟು ನೀರು ಇಲ್ಲದೇ ಇರುವುದಿಂದ ಇದೀಗ ಆತಂಕ ಪ್ರಾರಂಭವಾಗಿದೆ. ಇದೆಲ್ಲದರ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರ ಸುಮಲತ ಅವರಿಗೂ ಕೂಡ ಇದೊಂದು ಚಾಲೆಂಚ್ ಸಭೆಯಾಗಿದೆ.. ಸಭೆಯಲ್ಲಿ ರಾಜ್ಯದ ಮೇಲೆ ನಕಾರತ್ಮಕವಾಗಿ ಆದೇಶವನ್ನು ನೀಡಿದರೆ ಈ ಬಗ್ಗೆ ಸುಮಲತಾ ಅವರು ಯಾವ ರೀತಿಯಲ್ಲಿ ನಡೆದುಕೊಳ್ಳಲಿದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಸುಮಲತಾ ತನ್ನ ಎದುರಾಳಿಯನ್ನು ಸೋಲಿಸಿ ಕೊನೆಗೂ ಸಂಸತ್ತಿನ ಮೆಟ್ಟಿಲು ಹತ್ತಿದ್ದಾರೆ ..ಮುಂದೇ ಅವರ ರಾಜಕೀಯ ಭವಿಷ್ಯ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
Comments