ಅಣ್ಣಾಮಲೈ ರಾಜಕೀಯಕ್ಕೆ ಎಂಟ್ರಿ ಕೊಡ್ತಾರ..!! ಈ ಬಗ್ಗೆ ಅಣ್ಣಾ ಮಲೈ ಹೇಳಿದ್ದೇನು..?
ರಾಜ್ಯದಲ್ಲಿ ಸಾಕಷ್ಟು ಜನ ಖಡಕ್ ಐಪಿಎಸ್ ಅಧಿಕಾರಿಗಳು ಇದ್ದಾರೆ. ಅದರಲ್ಲಿ ಅಣ್ಣಾ ಮಲೈ ಕೂಡ ಒಬ್ಬರು..ಸಾಕಷ್ಟು ಭ್ರಷ್ಟಚಾರವನ್ನು ಬಯಲಿಗೆಳೆದ ಇವರು ಸಾರ್ವಜನಿಕರಿಗೂ ಕೂಡ ಇಷ್ಟವಾಗಿ ಬಿಟ್ಟಿದ್ದರು…ಆದರೆ ಇದೀಗ ಇವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ..ಕೆಲಸಕ್ಕೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು…
ಆದರೆ ಈ ಕುರಿತು ಸ್ವತಃ ಅಣ್ಣಾಮಲೈ ಅವರು ಸ್ಪಷ್ಟನೆ ನೀಡಿದ್ದು, ತಾವು ರಾಜಕೀಯಕ್ಕೆ ಹೋಗುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, ಶುಭೋದಯ ಎಲ್ಲರಿಗೂ, ಎಲ್ಲರೂ ದಯವಿಟ್ಟು ಸ್ವಲ್ಪ ತಾಳ್ಮೆಯಿಂದ ಇರಬೇಕು.. ಮನವಿ ಮಾಡುತ್ತೇನೆ. ನಾನು ನನ್ನ ನಿರ್ಧಾರವನ್ನು ಈ ಸಂಜೆ ನಿಮಗೆ ತಿಳಿಸುತ್ತೇನೆ. ನಾನು ರಾಜಕೀಯಕ್ಕೆ ಅಥವಾ ಎಲ್ಲಿಗೂ ಸೇರಿಕೊಳ್ಳುತ್ತಿಲ್ಲ ಧನ್ಯವಾದಗಳು ಎಂದು ತಿಳಿಸಿದ್ದಾರೆ..2011 ರ ಐಪಿಎಸ್ ಬ್ಯಾಚ್ ನವರಾದ ಅಣ್ಣಾಮಲೈ 2013 ರ ಕಾರ್ಕಳದ ಎಎಸ್ ಪಿ ಆಗಿ ನೇಮಕಗೊಂಡರು. ನಂತರ ಚಿಕ್ಕಮಗಳೂರು ಎಸ್ ಪಿ ಆದರು, ಸುಮಾರು 10 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಅಣ್ಣಾಮಲೈ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.. ಒಟ್ಟಾರೆಯಾಗಿ ಇರುವ ಕೆಲಸಕ್ಕೆ ನಾನು ರಾಜೀನಾಮೆ ಕೊಡುವುದಿಲ್ಲ.. ರಾಜಕೀಯಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಮುಂದೆ ಅವರು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ..
Comments